ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಳತಾಯಿ ಕವಳ ಅಮ್ಮ ಪ ಪಾಪಿ ಪರದೇಶಿಯ ಮರೆಯ ಬೇಡಿರಮ್ಮ ಅ.ಪ ಸಂಜೆಯ ಕವಳಕ್ಕೆ ಸಾವಿರ ಆಪತ್ತು ಅಂಜಿ ಓಡುವುದೆಂದು ಕೇಳಿಲ್ಲವೇನಮ್ಮ ಭುಂಜಿಸಿ ನಿಮ್ಮಯ ಪತಿಯ ಪ್ರಸಾದದ ಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ 1 ನಮದೊಂದು ಸಂಸಾರ ಬಲು ದೊಡ್ಡದವ್ವ ಶ್ರಮಿಸುವರದರೊಳಗೊಬ್ಬರಿಲ್ಲವ್ವ ಕಮಲವ್ವ ನಿಮ್ಮಯ ಅಮೃತಹಸ್ತದ ಕವಳ ಎಮಗೊಂದು ಕ್ಷಣದಲಿ ಅಮೃತವಾಗೋದವ್ವ 2 ಕ್ಷಿತಿಯೊಳು ಜ್ಞಾನಿಗಳಾಡುತಲಿಹರು ಅತುಲ ಮಹಿಮ ನಿಮ್ಮ ಪತಿಯ ಪ್ರಸಾದವ ಪ್ರತಿದಿನವಿತ್ತು ಪ್ರಸನ್ನರಾಗಿರವ್ವ 3
--------------
ವಿದ್ಯಾಪ್ರಸನ್ನತೀರ್ಥರು
ಕಾಲಮಹಿಮೆ ಕೇಳಿ ಜಗದಾಲೋಚನೆ ತಾಳೀ ಪ ಕೀಳು ಖೂಳರಿಗೆ ಮೇಲು ಹಾಸಿಗೆ ಮಂಚ ಬಾಲಾಜಿ ಭಜನೆ ಜನಕೆ ಜೋಳಿಗೆ ಯೀ ಪ್ರಪಂಚಾ 1 ಉತ್ತಮಪುರುಷರಿಗೆಲ್ಲ ತುತ್ತಿಗೆ ಮಾನಹೋಗಿ ಹೆತ್ತವ್ವೆ ಹೋಗೆ ಕಳ್ಳ ಚಿತ್ತರ್ಗೆ ಮಂಚಾ ತೂಗೆ 2 ಡಂಬಾಚಾರಿಗಳಿಗೆಲ್ಲಾ ಕೊಂಬು ಕುದುರೆಯಗಾಡಿ ಶಂಬೂನುತರೂ ಪಾಪಿಗಾಡಿಗಳ ಹಿಂದೆ ವೋಡೆ 3 ನಿಚ್ಚಾ ಮುತ್ತೈದೆರ್ಗೆಲ್ಲಾ ಅಂಜಿಕೆ ಅರುಶನವಿಲ್ಲಾ ಬಿಚ್ಚಾಲೆಯಿಲ್ಲದ ರಂಡೇರ್ಹೆಚ್ಚಿ ಹೀಗಾಯಿತಲ್ಲ 4 ದೋಷರಹಿತ ಹರಿದಾಸ ತುಲಸೀರಾಮಾ ದೇಶಿಕಾ ತನ್ನ ನಿಜದಾಸಾನ ಮಾಡಿಕೊಂಡಾ 5
--------------
ಚನ್ನಪಟ್ಟಣದ ಅಹೋಬಲದಾಸರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಬ್ರಹ್ಮವದು ಹ್ಯಾಗಿದೆಬ್ರಹ್ಮ ಕೇಳ್ವನ ಹಾಗಿದೆಬ್ರಹ್ಮವದು ಹೀಗೆಂದು ತೋರಲಿಕೆ ಶಕ್ಯವೇ ಪ ಬ್ರಹ್ಮವದು ಶೂದ್ರನೇಬ್ರಹ್ಮವದು ಭದ್ರನೇಬ್ರಹ್ಮವದು ರುದ್ರನೆಂದು ತೋರಿಸಲು ಶಕ್ಯವೇ 1 ಬ್ರಹ್ಮವದು ಯಂತ್ರವೇಬ್ರಹ್ಮವದು ತಂತ್ರವೇಬ್ರಹ್ಮವದು ಮಂತ್ರವೆಂದು ತೋರಿಸಲು ಶಕ್ಯವೇ 2 ಬ್ರಹ್ಮವದು ರೊಟ್ಟಿಯೇಬ್ರಹ್ಮವದು ಪುಟ್ಟಿಯೇಬ್ರಹ್ಮವದು ಹೊಟ್ಟೆಯೆಂದು ತೋರಿಸಲು ಶಕ್ಯವೇ 3 ಬ್ರಹ್ಮವದು ಜೋಳಿಗೆಬ್ರಹ್ಮವದು ಮಾಳಿಗೆಬ್ರಹ್ಮವದು ಹೋಳಿಗೆ ಎಂದು ತೋರಿಸಲು ಶಕ್ಯವೇ 4 ಹೇಗಿದೆಂದು ಕೇಳ್ವಡೆಹೀಗೆದೆಂದು ಪೇಳ್ವಡೆಹೇಗೆ ಹೀಗೆ ಎಂಬುದಕ್ಕೆ ಚಿದಾನಂದನ ನೋಡಿದೆ 5
--------------
ಚಿದಾನಂದ ಅವಧೂತರು
ವಾದಿರಾಜಾಶ್ರಮ ನೋಡಲು ಸಂಭ್ರಮ ಪಾಡಿ ಪೊಗಳುವರಿಗಾಹುದು ಪ್ರೇಮ ಪ ಕಾಡೊಳಗೆ ಸಂಚರಿಪ ಋಷಿಗಳು ಪಾಡಿಪೊಗಳುತ ಪರಮ ಪುರುಷನ ಬೇಡಿದಿಷ್ಟಾರ್ಥಗಳ ಪಡೆಯುತ ಕೂಡಿ ಸುಖಿಸುವ ಶಿಷ್ಟರಂದದಿ ಅ.ಪ ಪರಮಸಾತ್ವಿಕರೆಲ್ಲ ಪುರಂದರದಾಸರ ಪರಮ ಪುಣ್ಯದ ದಿನ ಬರಲು ಸಂಭ್ರಮದಿ ಪರಿಪರಿವಿಧದಿಂದ ಹರಿದಾಸರೆಲ್ಲರು ತ್ವರದಿಂದ ಗುರುಗಳಾಜ್ಞೆಯ ಮೀರದೆ ಭರದಿಂದ ನೆರೆದರತಿ ಶೀಘ್ರದಿಂದಲಿ ಮುದದಿಂದ ಗುರುಗಳಡಿಗೊಂದಿಸುತ ಕ್ರಮದಿಂದ ಸರಸವಾಕ್ಯಗಳಿಂದ ಶಿಷ್ಯರಿಂದ ಹರಿಸಿ ಆಶೀರ್ವಾದದಿಂದಲಿ ಸುರಿಸಿ ಅಮೃತವಾಣಿ ನುಡಿಯುತ ಹರುಷಪಡುತಿಹ ಗುರುಗಳಿಹ ಸ್ಥಳ 1 ಪವಮಾನಮತದವರೆಲ್ಲರೊಂದಾಗುತ ನಮಿಸಿ ಶ್ರೀಪತಿಗೆ ವಂದನೆ ಮಾಡುತ ವಿನಯದಿಂದಲಿ ತಮ್ಮನಿಯಮಿತ ಕಾರ್ಯವ ನÀಡೆಸುತ್ತ ತಂಬೂರಿಗಳ ಸುಸ್ವರದಿ ಮೀಟುತ ನಿಂದು ಹರುಷಿಸುತ ತಾಳಗಳ ಬಾರಿಸುತ ಶಿಷ್ಯರು ಕುಣಿಯುತ್ತ ಬಲುನಾದ ಕೊಡುತಿಹ ಕಾಲಗೆಜ್ಜೆಗಳೆಲ್ಲ ಘಲುರೆನುತ ದಾಸರಿಗೆ ಉಚಿತದ ಜೋಳಿಗೆಗಳನೆ ಪಿಡಿದು ನಡಿಯುತ್ತ ಶ್ರೀರಾಮರ ದೂತನ ಬಾರಿಬಾರಿಗೆ ನಮಿಸಿ ನಮಿಸಿ ಪೊಗಳುತ್ತ ಹರಿನಾಮ ಸ್ಮರಣೆಯಲಿ ಮಾರುತೀಶನ ಭಕುತರೆಲ್ಲರು ದ್ವಾರಬಿಡುತಲಿ ಪೊರಟು ಭಜಿಸುತ ಬೀದಿಯಲಿ ಕುಣಿಯುತ್ತ ಹರಿಗುಣ ಪಾಡಿ ಪೊಗಳುವ ಪರಮ ವೈಭವ2 ಆ ಮಾರುತನ ದಯದಿಯಾಯಿವಾರವು ಮಾಡಿ ಶ್ರೀನಿಕೇತನ ಪಾಡಿ ಪೊಗಳುತಲಿ ಜ್ಞಾನಿ ಪುರಂದರದಾಸರ ಚರಿತೆಯ ಪೇಳುವರು ಸಂಭ್ರಮದಿಂದಲಿ ನಲಿದಾಡುವರು ಹರಿದಾಸರ ಅದ್ಭುತಕಾರ್ಯಗಳ ಸುಸ್ವರದಿ ಪಾಡುವರು ಹರಿದಾಸ ಶ್ರೇಷ್ಠರ ಮಹಿಮೆಗಳ ಇನ್ನುಳಿದ ಶಿಷ್ಯರು ಪೇಳುವರು ವರ ಪಾರ್ಥಿವ ವತ್ಸರದಿ ಗುರುಗಳ ಕರುಣ ಪಡೆದವರು ನೆರೆದು ರಾತ್ರಿಕಾಲದಲಿ ಶ್ರೀ ಹರಿಯ ಭಜನೆ ಮಾಡುತಿರಲು ಹರುಷ ಪಡುತಲಿ ನಲಿದು ಕಮಲನಾಭ- ವಿಠ್ಠಲನೆ ಸಲಹು ಎನ್ನುವ3
--------------
ನಿಡಗುರುಕಿ ಜೀವೂಬಾಯಿ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಮಾಡಿದನೆನ್ನ ಫಕೀರನಾಗಿ ಸದ್ಗುರುಮಾಡಿದನೆನ್ನ ಫಕೀರನ ನೋಡಲಿಕ್ಕಾಶ್ಚರ್ಯಪ್ರಪಂಚ ಕಳೆದೆ ನಾಮರೂಪಕೆ ದೂರಪಅನುಭವಕಪ್ಪರ ಹೃದಯದ ಜೋಳಿಗೆಎನ್ನುವ ಕಂಕುಳೊಳಿಟ್ಟುಅನಿಮಿಷದೃಷ್ಟಿ ಅರುಹಿನಕಪನಿಅಮೃತ ಕಮಂಡಲು ಕೊಟ್ಟು1ನಾದದ ಕಿನ್ನರಿ ಕೈಯೊಳಗಿಟ್ಟುಟೊಪ್ಪಿಗೆ ಪೆಟ್ಟಿಗೆಯಿಟ್ಟಬೋಧದ ಅಂಗಿಯು ನಿರ್ಗುಣಲುಂಗಿಯ ಸೈರಣೆಲುಟಿಕೆಯ ಕೊಟ್ಟ2ಈಪರಿಮಾಡಿಯೆ ಬಯಲನುಹಿಡಿ ಎಂದು ಕರವನು ನೆತ್ತಿಯಲಿಟ್ಟಭೂಪ ಚಿದಾನಂದ ಫಕೀರನಾಗಿಯೆತಿರುಗೆಂದಪ್ಪಣೆ ಕೊಟ್ಟ3
--------------
ಚಿದಾನಂದ ಅವಧೂತರು