ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು ಥಳಥಳಿಸುತಿಹುದು ಒಳಹೊರಗೆ ಝಳಿಝಳಿಸುತಿಹದು ಮೊಳೆಮಿಂಚಿನ ಪರಿ ಸುಳವ್ಹುದೋರಿತು ಕಳೆವರದೊಳಗೆ 1 ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ ಸಾಧಿಸಿ ಕಂಡೆ ಸುಖಸದೋದಿತವ ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ ಭೇದಿಸಿತು ಮನಸು ನಿಜಬೋಧವ 2 ಭಾವ ಬಲಿದು ನೋಡಿ ದೇವಾಧಿದೇವನ ಸುವಿದ್ಯ ಸುರಸವ ಸವಿಸವಿದು ಪಾವನ್ನವಾಯಿತು ಮಹಿಪತಿ ಜೀವನವುಕಾವಕರುಣ ಗುರುದಯದಿಂದ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಣಿಯಾ ನೋಡಿದೆ ನಿನ್ನಾ ಪ. ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ. ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ ಬ್ರಹ್ಮಾದಿ ದ್ವಿಜರು ಹಾರೈಸಿ ಹರುಷದಿ ಪೂಜೆಗೊಂಬೊರೆ 1 ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ ಸಡಗರದಲ್ಲಿ ಇಂದಿರೇಶ ಗರುಡವಾಹನೆ ರಂಗಾ ಉರಗಾದ್ರಿನಿವಾಸ ಶೇಷಾಚಲವಾಸ ಶ್ರೀ ವೆಂಕಟೇಶಾ 2 ಸೃಷ್ಟ್ಯಾದಷ್ಟ ಕರ್ತಾ ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ ಅಷ್ಟ ಮಹಿಷಿಯರ ಆಳದ ಮದವೆಷ್ಟೊ ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ3
--------------
ಕಳಸದ ಸುಂದರಮ್ಮ
ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು