ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ಪ ಆಳೋ ಅರಸನೇ ಅ.ಪ. ಗಾಣ ಎಳೆಯುವ ಕ್ವಾಣನಾದೆನೋ ಕಾಣವೋ ನಯನಾ ಕಾಣಿ ವೇಣುಗೋಪಾಲ 1 ಮಾಯಾ ಮಗನಿಗೆ ನಾಯನಾಗಿರುವೆ ಮಾಯಾ ಕಾಯೋ ನರಹರಿ 2 ಬೇಡುವರು ಧನ ಕಾಡಿ ಎನ್ನನು ನೋಡು ಫಣಿಶಯನಾ ನಾಡಿಗೊಡೆಯಾ ಕೈ ಜೋಡಿಸುವೆನಯ್ಯಾ 3 ಬೇಗ ತವದಾಸನಾಗಿ ಮಾಡಿಕೋ ಸಾಗರಶಯನಾ ಈಗ ಭವಭಯ ನೀಗಿಸೈಯ್ಯ ಕೈ ಸಾಗದಾಯಿತು ಭಾಗವತಪ್ರಿಯಾ 4 ಆಶಾ ಬಿಡಿಸಿ ನೀ ಲೇಸು ಕೊಡು ಹನುಮೇಶವಿಠಲನೇ ಘಾಸಿಯಾದೆನು ಪೋಷಿಸಯ್ಯ ರಮೃಶ ಪಂಢರಿವಾಸ ವಿಠಲ 5
--------------
ಹನುಮೇಶವಿಠಲ
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬಿನ್ನಹ ಮಾಡುವೆನು ಅತ್ತಿಗೆಯರ ಚನ್ನಾಗಿ ಗೆಲಿಸೆಂದುಚದುರ ಮುದ್ಗಲವಾಸನೆದುರಿಗೆಮಧುರ ವಾಕ್ಯಗಳ ನುಡಿಸೆಂದು ಪ. ಗೋಕರ್ಣ ಹಿಮವಂತ ಕೇದಾರಿ ದೇಶಗೋಕುಲ ವೃಂದಾವನ ಮಥುರೆಯಗೋಕುಲ ವೃಂದಾವನ ಮಥುರೆಯ ಒಡೆಯನಸಾಕಲ್ಯದಿಂದ ಬಲಗೊಂಬೆ 1 ಕರವೀರ ಪುರವಾಸ ದೊರೆಯುಪಂಢರಿನಾಥವರವಡ್ಡಿಒಡೆಯ ಬದರಿಯವರವಡ್ಡಿಒಡೆಯ ಬದರಿ ನಾರಾಯಣಗೆಕರವ ಜೋಡಿಸುವೆ ಕರುಣಿಸು2 ಅಯೋಧ್ಯ ಪುರವಾಸ ಗಯಾ ಗದಾಧರಕೈವಲ್ಯ ನೀವ ಜಗದೊಡೆಯಕೈವಲ್ಯ ನೀವ ಜಗದೊಡೆಯನ ಪಾದಕೈಮುಗಿದು ಮೊದಲೆ ಬಲಗೊಂಬೆ3 ದೇಶ ದೇಶದ ಜನಕೆ ಲೇಸಾಗಿ ಸಲಹುವೆಶ್ರೀ ಸತಿದೇವಿ ಅರಸನೆಶ್ರೀ ಸತಿದೇವಿ ಅರಸನೆ ಕಾಶಿವಿಶ್ವೇಶ್ವರನ ಮೊದಲೆ ಬಲಗೊಂಬೆ4 ಹರಿಹರವಾಸಗೆ ಕರಗಳ ಜೋಡಿಸಿಸರ್ವರಿಗೆ ವರವ ಸುಲಭದಿಸರ್ವರಿಗೆ ವರವ ಸುಲಭದಿ ಕೊಡುವಹರದೆಯರ ಪಂಥವ ಗೆಲಿಸೆಂದು5 ಲಕ್ಷ್ಮಿರಮಣನೆ ಪಕ್ಷಿವಾಹನ ಸ್ವಾಮಿಕುಕ್ಷಿಲೆ ಜಗವ ಸಲಹುವೆಕುಕ್ಷಿಲೆ ಜಗವ ಸಲಹುವೆ ಶೂರ್ಪಾಲಿವೃಕ್ಷರಾಜನ ಬಲಗೊಂಬೆ6 ಗಲಗಲಿ ನರಸಿಂಹ ಬಲು ದಯವಂತಸುಲಭದಿ ವರವ ಕೊಡುವವನುಸುಲಭದಿ ವರವ ಕೊಡುವ ರಾಮೇಶನ ಚಲ್ವ ಮೂರ್ತಿಯ ಬಲಗೊಂಬೆ 7
--------------
ಗಲಗಲಿಅವ್ವನವರು