ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂದಿದೆ ಇದಿಗೊ ಮದ್ದಾನೆ ಪ ಜ್ಞಾನಿಗಳೊಳಾಡುವ ಮದ್ದಾನೆ ಅ ದೇವಕಿಯೊಳು ಪುಟ್ಟಿದಾನೆ - ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ - ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ 1 ನೀಲವರ್ಣದ ನಿಜದಾನೆ - ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ - ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ 2 ಬಾಲೇಂದು ಮುಖದ ಮರಿಯಾನೆ - ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ 3 ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ 4 ಮಲ್ಲರೊಡನೆ ಗೆಲಿದಾನೆ - ಕಡುಖುಲ್ಲ ಕಂಸನ ಕೆಡಹಿದಾನೆ - ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ 5 ತರಳೆ ರುಕ್ಮಿಣಿಯ ತಂದಾನೆ - ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ 6
--------------
ಕನಕದಾಸ
ಎನ್ನ ಮೋಹನ ತುಪಾಕಿಯನು ಪಿಡಿದು ಹಸ್ತದಲಿ ಚೆನ್ನಾಗಿ ಶೃಂಗರಿಸುವೆ ಪ ಭಿನ್ನಭಾವನೆಯ ಕಳಿದುಳಿದು ಕೋವಿಗೆ ಮತ್ತೆ ಇನ್ನು ಜೋಡಿಲ್ಲವೆಂದು ಇಂದುಅ.ಪ. ಪ್ರೇಮರಸವೆಂಬ ಜಲದಲಿ ತೊಳೆದು ಶುಚಿಮಾಡಿ ನೇಮವೆಂದೆಂಬ ನಿರ್ಮಲವಾಗಿಹ ಆಮಹಾಕನಕ ರಜತದ ಭೂಷಣವ ತೊಡಿಸಿ ಕಾಮವನು ಸುಟ್ಟು ಮಸಿಮಾಡಿ ತುಂಬುವೆನದಕೆ ಎನ್ನೆ 1 ಹಮ್ಮಮತೆಯೆಂಬ ಗುಂಡನು ಅದರಮೇಲಿರಿಸಿ ಒಮ್ಮನಸು ಎಂಬ ಗಜದಿಂದ ಜಡಿದು ಒಮ್ಮೆ ಗುರುವಾಕ್ಯರಂಜಿಕೆಯ ಕಿವಿಯೊಳಗರದು ಬಿಮ್ಮನೇ ಬಿಗಿದು ಈಕ್ಷಿಸಿ ನೋಡುವೆ ಎನ್ನ 2 ಮೆರೆವ ಸುಜ್ಞಾನ ಜ್ಯೋತಿಯ ಬತ್ತಿಯನು ಕೊಳಿಸಿ ಭರದಿ ಬರುತಿಹ ಅಷ್ಟಮದ ಕರಿಗಳಾ ತರಿದಾರು ವೈರಿವರ್ಗಕೆ ಕೆಡಹಿ ಗುರಿಯಿಂದ ಗುರುವಿಮಲಾನಂದ ರಸಭರಿತನಾಗಿರುವಂಥ 3
--------------
ಭಟಕಳ ಅಪ್ಪಯ್ಯ
ನರಿತು ಅರ್ಚಿಸಲು ಲಿಂಗೈಕ್ಯಕೆ ಯೋಗ್ಯ ಪ ವೈರಿ ಸಂಸಾರ ಮಾಯಾ ವನಿತೆ ಇಕ್ಕಿದ ಮದ್ದು ದುಃಖದಾಕಾರಾ ಮನವೆ ಶುದ್ಧಾತ್ಮವಿಚಾರಾ ನೀನು ನೆನೆದು ಮರೆಯದಿರು ಗುರು ಉಪಕಾರಾ 1 ನಗಿಸಿ ಅಳಿಸುವುದು ಕುಂದು ಭಕ್ತ ರಘವ ನಿವಾರಿಸಿ ಸಲಹಬೇಕೆಂದು ಮೃಗಧರ ರೂಪಿಲಿ ಬಂದು ಸ್ವಾಮಿ ಸೊಗಸಾಗಿ ಶ್ರೀ ಗುರುಚಿತ್ತಕೆ ತಂದು 2 ಜೋಡಿಲ್ಲದೈಶ್ವರ್ಯದಿಂದಾ ಹೋ ಗಾಡಿಸೋ ಘೋರಸಂಸಾರದ ಬಂಧಾ ನೋಡೋ ನಿತ್ಯಾತ್ಮನ ಚಂದಾ ನಲಿ ದಾಡೋ ಎನ್ನನು ಗುರು ವಿಮಲಾನಂದಾ 3
--------------
ಭಟಕಳ ಅಪ್ಪಯ್ಯ
ಯಾರಿಗೆ ದೂರುವೆನು ವೆಂಕಟರಾಯ ಚಾರದ ಮಹಿಮೆಯನು ಪ ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ ಹೋರಾಟವನಿತ್ತು ಮಾರಿದೆಯೆನ್ನನು ಅ.ಪ ತೇಜವುಳ್ಳವನೊಬ್ಬನು ಐದನೆಯಲ್ಲಿ ಮೋಜಾಗಿ ಒಳಹೊಕ್ಕನು ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು ಪಾಜಿ ಮಾಡಿದನೆನ್ನ ಮೂಜಗದೊಡೆಯ 1 ಸೀತವಾದವನೊಬ್ಬನು ಅಷ್ಟಮದದಲ್ಲಿ ಕಾತುರದೊಳು ಬಂದನು ಘಾತಕತನ ಮಾಡಿ ಭೀತಿಗಳನು ತೋರಿ ದಾತ 2 ಮೂರನೆಯವನೊಬ್ಬನು ಏಳನೆಯಲ್ಲಿ ಸೇರಿಯೆ ಕಳುತಿದ್ದನು ಏರಿ ಬಂದುದನೆಲ್ಲ ಆರಿಸಿ ಮಾರಿಸಿ ಸೂರೆಗೊಂಡನು ಎನ್ನ ವಾರಿಜನಾಭ 3 ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ ಶತ್ರುವಾಗಿಯೆ ನಿಂತನು ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ ಪಾತ್ರವÀ ತೀರಿಸಿ ಗಾತ್ರವ ಕೆಡಸಿದ 4 ಸುರಗುರುವೆಂಬುವನು ಮೂರನೆಯಲ್ಲಿ ಸ್ಥಿರವಾಗಿ ನಿಂತಿಹನು ಗುರುಗಳ ಮುಖದಿಂದ ಕರಕರೆ ಹತ್ತಿಸಿ- ದರು ಪಾಡಿ ಹರಿಯನ್ನು ತಿರುಕನಾದೆನು ನಾನು 5 ಆರನೆ ಮನೆಯೊಳಗೆ ದೈತ್ಯರ ಆ- ಚಾರಿಯನು ನಿಂತಿಹನು ಹಾರುಮಾತುಗಳೇಕೆ ತೂರಿದನೆಲ್ಲವ ಪಾರಾದೆನು ನಾನು ವಾರಿಜನೇತ್ರ 6 ಆದಿತ್ಯ ಪುತ್ರನಾದ ಶನೈಶ್ವರ ಬಾಧಿಪ ಮನೆಗಳಾರು ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ ವೇದಗಳೆಲ್ಲವು ಏಳುಯೆಂಟಿರಲಿ 7 ನಾಡನಾಳುವ ರಾಯರ ಕೆಡಿಸಿ ಮುಂದೆ ಕಾಡಿಗೆ ಸೇರಿಸಿದ ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ 8 ವಾರಿಧಿ ಮಥನದಲಿ ಸುಧೆಯನ್ನುಂಡು ಸೇರಿದ ಗೃಹರೊಳಗೆ ಮೀರಿದರಿಬ್ಬರ ಪಾರುಪತ್ಯಗಳನ್ನು ಮಾರ ಸನ್ನಿಭನೆ 9 ಸಂಧಿ ಸಂಧಿಯಲಿವರು ಬಂದೆನ್ನನು ದಂದುಗ ಬಡಿಸುವರು ಇಂದ್ರಾದಿ ದೇವರಿಗಳವಲ್ಲ ಇವರೊಳು ಹಿಂದು ಮುಂದರಿಯೆನು ಬಂದ ಬವರವನ್ನು 10 ಶುಭದಲ್ಲಿ ಶುಭವಿತ್ತರು ವೆಂಕಟರಾಯ ಶುಭ ತೋರಿಸೊ ಅಭಯವನಿಪ್ಪಂಥ ವರಾಹತಿಮ್ಮಪ್ಪನೆ ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ 11
--------------
ವರಹತಿಮ್ಮಪ್ಪ