ಕರುಣಾ ತೋರದದೇನೊ ನರಹರಿಯೆ ನಿನ್ನ
ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ
ಕಮಲ ಸ್ಮರಣೆಯ ಇಹಪರಕೆ ಗತಿಯಂ
ದಿರುವ ಮನಜರಿಗ್ಹರುಷದಿಂದಲಿ ಪ
ಸುಸಾಮಗಾನಪ್ರಿಯ ನರಸಿಂಗ
ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ
ಶೌರಿ ಪುರಾಣಪುರುಷ
ದಾನವಾಂತಕ ಶ್ರೀನಿವಾಸನೆ
ಶರಪಾಣೆ ವಿಷ್ಟಕ್ಸೇನವರ
ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ 1
ಸಂಯಮಿ ವೃಂದನುತ ಮುಚ-
ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ
ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ
ಕಂಬುಕಂಧರ ಇಂದು ಮುಖ ಶ್ರೀ ಸುಂದರಾಂಗನೆ
ರೂಪದಿ ಬಂದು ಸ್ತಂಭದಿ
ರಕ್ಷಿಸೆಂದೆನಲು ಹರಿ 2
ತ್ರಿಜಗದ್ಭರಿತ ಕೌಸ್ತುಭಹಾರ
ನರಮೃಗಾಕಾರ
ಮಂಗಳಕರ ಮಹಿಮಾ
ಶರಣು ಭಾಸುರ ಕಿರೀಟನೆ
ನಿರತದಲಿ `ಹೆನ್ನೆಪುರ ನಿಲಯ'
ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ 3