ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದೋದ್ದಾರನ ಸಖಿ ಮೊದಲಿಗೆ ಬಲಗೊಂಬೆಮುದದಿಂದ ಮುಯ್ಯ ಗೆಲಿಸೆಂಬೆನಲ್ಲೆ ನಮೋ ಎಂಬೆ ಸುರರ ಎಲ್ಲರ ಬಲಗೊಂಬೆ ಪ. ನಿಗಮ ತಂದವನಿಗೆ ಮುಗಿವೆವು ಕರಗಳನಗವ ಪೊತ್ತವನ ಬಲಗೊಂಬೆ 1 ಜಗವನೆತ್ತಿದವಗೆ ಜಾಣಿ ವಂದಿಸಿಕರುಳು ಬಗೆದ ನರಸಿಂಹನ ಬಲಗೊಂಬೆ 2 ಪೊಡವಿಯನಾಳಿದವಗೆ ಬಿಡದೆ ವಂದಿಸಿಕೊಡಲಿಯ ಪಿಡಿದ ಭಾರ್ಗವನ ಬಲಗೊಂಬೆ 3 ಸೇತುವೆ ಕಟ್ಟಿದವಗೆ ಪ್ರೀತಿಲೆ ನಮಿಸಿಪಾರಿಜಾತ ತಂದವನ ಬಲಗೊಂಬೆ4 ವಸ್ತ್ರ ಹೀನಗೆ ನಾವು ಅತ್ಯಂತ ನಮಿಸಿ ಕುದುರೆಹತ್ತಿದ ರಾಮೇಶನ ಬಲಗೊಂಬೆ 5
--------------
ಗಲಗಲಿಅವ್ವನವರು
ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1 ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2 ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3 ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4 ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5 ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6 ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7 ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಂಗನಮ್ಮನೆಗೆ ತಾ ಬಂದಮತ್ತೇನು ತಂದ ಪ.ಜಗದೋದ್ದಾರ ಸಭೆಗೆ ಬಂದನಗುವ ಪರಿಯ ಹೇಳಿದ್ದು ತಂದಬಗೆ ಬಗೆ ವಸ್ತ್ರ ಕೊಳ್ಳಿರೆಂದಪಗಡಿ ಧರ್ಮಗೆ ತರಲಿಲ್ಲೆಂದ 1ವಾಣಿ ಮಾವ ಮನೆಗೆ ಬಂದಜಾಣತನವ ಹೇಳಿದ್ದು ತಂದಮಾಣಿಕ ಮುತ್ತು ಕೊಳ್ಳಿರೆಂದಕ್ವಾಣನ ಧರ್ಮಗೆ ತರಲಿಲ್ಲೆಂದ 2ಕೃಷ್ಣರಾಯಸಭೆಗೆ ಬಂದಎಷ್ಟು ಜಂಬ ಹೇಳಿದ್ದು ತಂದಪಟ್ಟಾವಳಿಕೊಳ್ಳಿರೆಂದಹುಟ್ಟು ಭೀಮಗೆತರಲಿಲ್ಲೆಂದ 3ನಳಿನಾಕ್ಷ ಸಭೆಯೊಳು ಬಂದಹೊಳೆವೊ ಎಷ್ಟು ಹೇಳಿದ್ದು ತಂದಝಳಿಸೋವಸ್ತ್ರ ಕೊಳ್ಳಿರೆಂದಬಳೆಯ ಪಾರ್ಥಗೆ ತರಲಿಲ್ಲೆಂದ 4ರಾಜ್ಯ ಲಕ್ಷಣ ನಿನಗಿಲ್ಲೆಂದಮಾಜುದಾ ಕುಲ ಧರ್ಮಕುಂದತೇಜಿ ಮುಂದೆ ಓಡಿದ್ದು ಚಂದಸೋಜಿಗವಲ್ಲ ನಕುಲನೆಂದ 5ಸುಮನಸರು ನಗುವೊರೆಂದಭ್ರಮೆಯ ಕಳೆದ್ಯೊ ಸಹದೇವ ಎಂದಅಮಿತ ದನವ ಕಾಯ್ದ್ಯೊಛಂದರಮಿಯ ಅರಸು ನಗುವ ನೆಂದ 6ಅಂದ ಮಾತಿಗೆ ಬಲರಾಮ ಹೀಗೆಂದಚಂದ ವಾಯಿತು ಕುಶಲವೆಂದನಿಂದ್ಯವ ನೀ ಮಾಡಿಕೊ ಎಂದಇಂದಿರೇಶಗೆ ತಿಳಿಸಿರೆಂದ 7
--------------
ಗಲಗಲಿಅವ್ವನವರು