ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಘಟಿಕಾಚಲದ ವಾಯುದೇವರನ್ನು ನೆನೆದು) ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ ತ್ರಿಜಗದ್ವಲಯವÀ ನಡಸುವಿ ಪ. ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ- ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ- ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ ತೋರುವೆಯೊ 1 ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ ಪರಿಹರಿಸದರನು 2 ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ ಮುಷ್ಟಿಯಿಂಧೆಂದಿಸಿ ಮೆರೆದನೆ 3 ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು ಧಾಮನಿರ್ಜರೋದ್ಧಾಮ ಸುಮಹಿಮ 4 ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ ವಾಸರ ಒಲುಮೆಯಿಂದಲುದಿಸಿ ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ ಘಟಿಕಾಚಲದಲಿ ನೆಲಿಸಿದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದಿರೆ ಮನೋಹರ ಭಕ್ತಲಲಾಮ ಸಿಂಧುಸದನ ತ್ರಿಜಗದೋದ್ದಾಮ ಪ ಮಂದರಮಂದಿರ ಮೇಘ ಶ್ಯಾಮ ಕುಸುಮ ಅ.ಪ ಅಮಿತ ಲೀಲ ಸಗುಣನಿರ್ಗುಣ ಮಹಿಮಜಾಲ ಸುಜನ ಪಾಲ ಕಾಲ 1 ಪರತರಪಾವನ ಕರುಣಾಂತರಂಗ ಮಾಧವ ಪರಿಭವ ಭಂಗ ಸಿರಿ ನರಸಿಂಗ ಮರಣರಹಿತ ಪ್ರಭುವರ ನೀಲಾಂಗ2 ಗೋಕುಲಪತಿ ಗೋಪಾಲಶೀಲ ವ್ಯಾಕುಲಪರಿಹರ ವೇಣುಲೋಲ ಕಾಕುದನುಜ ಸಂಹಾರ ವಿಶಾಲ ಲೋಕಪಾವನೆ ವರ ದೇವಕಿ ಬಾಲ 3 ಯೋಗಿ ವಂದಿತ ವನಜ ಸಂಭವಾದಿ ಸುರಮುನಿವಿನುತ ಚಿನುಮಯ ಚಿದ್ರೂಪ ಚಿತ್ಕಳಾಭರಿತ ಜನಕತನುಜೆಪತಿ ವಿಮಲಚರಿತ 4 ಗೋಕುಲನಾಯಕ ಶ್ರೀಕೃಷ್ಣನಮೋ ವೈಕುಂಠನಾಯಕ ಶ್ರೀ ವಿಷ್ಣು ನಮೋ ಲೋಕನಾಯಕ ಶ್ರೀನಿವಾಸ ನಮೋ ಭಕುತಿದಾಯಕ ಶ್ರೀರಾಮ ನಮೋ5
--------------
ರಾಮದಾಸರು
ಜಗದಾದಿ ನಮಿತ ಆಗಮಾತೀತ ಖಗವರಗಮಿತ ಭಾಗವತಪ್ರೀತ ಸುಚರಿತ ಪ ಭವ ಬಾಧ್ಹರಣ ಜನನಮರಣ ಭಯನಿವಾರಣ ದಯಸುಸದನ ಭುವಿಜಾರಮಣ ಭಕ್ತೋದ್ಧಾರಣ ವಿಮಲಜ್ಞಾನ ಕರುಣಿಸು 1 ಅಮಿತಲೀಲ ಕುಜನಕಾಲ ರಮೆಯಲೋಲ ಶರಣುಶೀಲ ಕೌಸ್ತುಭಮಾಲ ಸುಮನಪಾಲ ಎನ್ನ ಭ್ರಮಜಾಲ ಛೇದಿಸು 2 ಭೃತ್ಯಲಲಾಮ ಶಕ್ತರಕಾಮ ಪೂರ್ತಿನಿಸ್ಸೀಮ ಕರ್ತುಶ್ರೀಭೌಮ ನಿತ್ಯನಿರಾಮ ಜಗದೋದ್ದಾಮ ಮುಕ್ತಿಪದ ಸೋಮ ಶ್ರೀರಾಮ 3
--------------
ರಾಮದಾಸರು