ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ ಎನ್ನ ನೀ ಕಾಯಬೇಕೊ ಪ ದೀನದಯಾಳು ದೇವ ನೀನೆ ಕಾಯದೆ ಬಿಟ್ಟ ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ ಉನ್ನತ ಹೃದಯನೆ ಮುನ್ನ ನಾ ಮಾಡಿದ ಗನ್ನಗತಕತನವನ್ನು ದಯದಿ ಕ್ಷಮಿಸು ಇನ್ನೀಭವದಿ ಎನಗೆ ನಿನ್ನಯ ಸನ್ನುತಿ ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ 1 ಶರಣಾಗತರಕ್ಷಣಾನಾಥಜನಬಂಧುವೇ ಕರುಣದಿ ನಿಮ್ಮಂಥ ದೇವರನುಕಾಣೆ ದುರಿತದೂರನೆ ಎನ್ನ ದುರಿತದುರ್ಗಣವನ್ನು ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ 2 ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ ದಯ್ಯ ಶ್ರೀರಾಮ ವಿಜಯವಿಠಲರಾಯ ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ ಜೀಯ ದಯದಿ ಕಾಯೊ ಪಂಢರಿರಾಯ 3
--------------
ರಾಮದಾಸರು