ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭ ಪಾದ ಪಾದ ತೀರ್ಥಕ್ಕೆ || ಜಯ || 1 ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2 ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3 ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4 ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5
--------------
ಭೀಮಾಶಂಕರ
ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಪ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ 1 ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ 2 ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ 3 ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ ಅರ್ಥಿಯಿಂದಲಿ ಪೂಜಿಪ4 ತ್ರಿಜಗದೊಳಗಿನವರಿಗೆ ಎಣೆಗಾಣೆ ಕುಜನ ಮತ ಸೋಲಿಸುವಲ್ಲಿ ವಿಜಯವಿಠ್ಠಲನೆ ದೈವವೆಂದು ಧ್ವಜವೆತ್ತಿ ತಿರುಗಿದ ಮುನಿಪ 5
--------------
ವಿಜಯದಾಸ
ಪಾದ ಚಿಂತನವು ಕ್ಷಣದಲಿ ಶೋಧಿಪುದು ಮತಿಯ ತಾರಕ ಪ ಮೋದತೀರ್ಥರ ಭೇದಮತ ಅನು ವಾದ ಮಾಡಿದ ಶ್ರೀಜಯತೀರ್ಥರ ಅ.ಪ ಈ ಜಗದೊಳಗಿನ ರಾಜಕೀಯದ ಸೋಜಿಗ ಜೀವನವನೆ ತೊರೆದು ರಾಜೀವೋದ್ಭವನಯ್ಯನ ಚರಣಾಂ ಬೋಜ ನಿರತ ಯತಿರಾಜರ ತಾರಕ 1 ಕಾಕುಮತಗಳನೇಕಗಳನು ನಿ ರಾಕರಿಪ ಗ್ರಂಥಗಳನು ರಚಿಸಿ ಲೋಕೋತ್ತರನಿಗೆ ನ್ಯಾಯಸುಧೆಯಭಿ ಷೇಕವ ಮಾಡಿದ ಟೀಕಾಚಾರ್ಯರ 2 ವಿಧಿ ಫಾ ಲಾಕ್ಷನುತ ಶ್ರೀಕೃಷ್ಣನ ಪೂಜಕ ದುಷ್ಟ ಪಕ್ಷ ನಿರಾಸದಲಿ ಅತಿ ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3
--------------
ವಿದ್ಯಾಪ್ರಸನ್ನತೀರ್ಥರು
ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ