ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಿ ನಾನರಿಯೆನೆ ನಿನ್ನಯ ಮಹಿಮ ಕರುಣದಿ ಇಡು ಪ್ರೇಮ ಪ ಬಾರಿ ಬಾರಿಗೆ ನಿನ್ನ ಭಜಿಸುವ ಭಕ್ತರ ಪಾರುಗಾಣಿಸಿ ಪೊರೆ ನಾರಿ ಶಿರೋಮಣಿ ಅ.ಪ ಕನಸು ಮನಸಿನೊಳ್ ನಿನ್ನಯ ಧ್ಯಾನ ಬಿಡದಲೆ ನಾ ಇನ್ನ ನೆನಸಿ ನೆನಸಿ ಸುಖಿಸುವೆ ಮುನ್ನ ವನಜಾಕ್ಷಿಯೆ ನಿನ್ನ ಅನುದಿನ ನಿನ್ನನು ಸ್ಮರಿಸುವ ಸುಜನರ ಘನವನುಳುಹಿ ಕಾಯೆ ಮನಸಿಜನ ತಾಯೆ 1 ಸೃಷ್ಟಿಯೊಳಗೆ ಶೆಟ್ಟಿ ಕೆರೆಯ ತಟದಲಿ ನೀ ನಿಂತು ಶ್ರೇಷ್ಠಳೆನಿಸಿ ಭಕ್ತರ ಮೊರೆಯ ನಿತ್ಯದಿ ನೀನರಿತು ಇಷ್ಟದಿ ಕೇಳುತ ಶಿಷ್ಟಜನರ ಅಘ ಹಿಟ್ಟುಮಾಡಿ ಕಾಯೆ ಶ್ರೀ ಕೃಷ್ಣನ ಜಾಯೆ 2 ಮದನನಯ್ಯನ ಮೋಹದ ರಾಣಿ ಮದಮುಖದ ಶ್ರೇಣಿ ವಧಿಸಿದ್ಯೆಲೆ ಪರಮ ಕಲ್ಯಾಣಿ ಜಗದೊಳಗತಿ ಜಾಣೆ ಸದನ ಮಾಡಿಕೊಂ ಡೊದಗಿ ಭಕ್ತರ ಮುದವಪಡಿಸಿದ್ಯೆಲೆ 3 ಜಗದೊಳು ನಿನಗೆ ಸರಿಯಾರೆ ಪರಿಪರಿ ವಯ್ಯಾರೆ ಅಗಣಿತ ಗುಣಗಂಭೀರೆ ಸುಂದರ ಸುಕುಮಾರೆ ಬಗೆಯಲಿ ಎನ್ನವಗುಣಗಣ ವೆಣಿಸದೆ ಸೊಗದಿಂದಲಿ ಕಾಯೆ ನಗಧರನ ಪ್ರಿಯೆ 4 ಅನುವನರಿತು ಪಾಲಿಸು ಮುನ್ನನಂಬಿದ ಮನುಜರನ ಅನುದಿನ ನಿನ್ನ ಪಾದಧ್ಯಾನ ಮನಸಿಗೆ ಕೊಟ್ಟೆನ್ನ ವನಜಾಕ್ಷಶ್ರೀ ಪ್ರಾಣನಾಥ ವಿಠಲನ ಸನ್ನಿಧಾನವಿತ್ತು ಮನ್ನಿಸು ತಾಯೆ 5
--------------
ಬಾಗೇಪಲ್ಲಿ ಶೇಷದಾಸರು
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು