ನುಡಿಯು ನುಡಿದಾ ನೆಡೆಯು ಬಾರದೂ
ಜಗದೊಳಗೆ ತತ್ವದ ಪ
ನುಡಿಯು ನಡಿದಾ ನೆಡೆಯು ಬಂದರೆ
ಗುಡಿಗಳಿಗೆ ತಾನೋಗಲ್ಯಾತಕೆ
ಪೊಡವಿಗೀಶನು ಶಿವನು ತನ್ನೊಳ
ಗಡಗಿಯಿರಲಿದನರಿಯದವರಿಗೆ 1
ಎದ್ದು ಹೋಗಲು ದಾರಿಯೊಳಗೊಂದು ತಾ ಹಿಂದೆ ಮಾಡಿದ
ಬುದ್ಧಿ ಕರ್ಮದಂತೆ ಮತ್ತೊಂದು
ಉದ್ದವಾಗಲುಕಡೆಗೆಜಗದೊಳುಹದ್ದುಕಾಗೆಯ ಜನ್ಮವಲ್ಲದೆ
ಮುದ್ದೆಮಾತೇನಯ್ಯ ಸ್ತ್ರೀಪರಸಿದ್ಧಸಾಧ್ಯರಿಗಾದ ಈ ನಿಜ2
ಆದ ಬೆಳೆಯನ್ನಳತೆ ಮಾಡೆಲೊ ಯೀ ದೇಹತತ್ವದ
ಶೋಧನೆಯೊಳು ಕುಳಿತು ನೋಡೆಲೈ
ವೇದಗೋಚರನಾದ ಜಗದೇಕಾದಿಗುರುವು ತುಲಸಿರಾಮನ
ಪಾದ ಭಜನೆಯೊಳಿರಲು ಕಾಣುವ ಬೋಧೆಯಾತ್ಮರಿಗಾದ ಈ ನಿಜ3