ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೇನಮೋ ಜಗದೇಕನಾಥ ರಮಾ ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ ಜಗದೇಕವೀರ ಜನನಾದಿ ದೂರಾ ಸುಗುಣ ವಿಸ್ತಾರ ಸುಖಮಯ ಶರೀರ 1 ಗಾನರಸಲೋಲ ಕನಕಮಯಚೇಲ ಆನತೋದ್ಧರಣ ಅಮೃತಾಬ್ಧಿಶಯನ 2 ಚಂದ್ರಾರ್ಕನಯನ ಚಾರುತರ ಕಥನ ಇಂದ್ರಾರಿ ಮಥನ ಇಭವೈರಿವದನ ಇಂದ್ರ ಸಂಕ್ರಮಣ ವೇಲಾಪುರಿಸದನ ವಂದ್ಯಾಖಿಲಜನ ವೈಕುಂಠ ರಮಣ3
--------------
ಬೇಲೂರು ವೈಕುಂಠದಾಸರು
ಮಾರ ಜಗದೇಕವೀರ ನಿನ್ನ ಕೊಮಾರ ನೀ ದುಃಖದೂರ ಸುಖಕರ ಎಲೆ ನಾರಾಯಣ ಜಗದ್ಧರ ಮುಕ್ತಿದಾ-ತಾರ ಎನಗೆ ನಿನ್ನ ತೋರ ಇನ್ನುಬಾರಾ ನಾನರಿಯೆ ಸಿರಿಧರ ಪ. ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1 ಕಂಡಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸಿ ದುರುಳರಸಂಗವ ಬಿಡಿಸು 2 ಶ್ರೀ ಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರ ಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಡಿದುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
--------------
ವಾದಿರಾಜ
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಸಾಮಧಾನವು ಸಾಮಧಾನ ಪವಮಾನ ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ. ಲೋಕ ಮುಳುಗುವದು ನೀನೀ ಕೆಲಸಮಂಗೈಯೆ ಸಾಕುವವರ್ಯಾರು ಜಗದೇಕವೀರ ಶ್ರೀಕಾಂತಸುಪ್ರೀತ ಶೋಕಮೋಹವಿಧೂತ ಪರಾಕು ಮುಖ್ಯಪ್ರಾಣ 1 ಜಗಕೆ ನೀನಾಧರ ಜನ್ಮ ಮೃತಿಭಯದೂರ ಚಾಗಮಾಗಮವಿಚಾರ ನಿತ್ಯಶೂರ ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ ಮಗುಚಬೇಡೈ ಧರೆಯ ಮುಗಿವೆ ನಾ ಕೈಯ2
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಮಧಾನವು ಸಾಮಧಾನ ಪವಮಾನಶ್ರೀಮನ್ಮಹಾಸುಗುಣಧಾಮಸುತ್ರಾಣಪ.ಲೋಕ ಮುಳುಗುವದು ನೀನೀ ಕೆಲಸಮಂಗೈಯೆಸಾಕುವವರ್ಯಾರು ಜಗದೇಕವೀರಶ್ರೀಕಾಂತಸುಪ್ರೀತ ಶೋಕಮೋಹವಿಧೂತಸಾಕು ಬಿಡು ಸೈರಿಸುಪರಾಕುಮುಖ್ಯಪ್ರಾಣ1ಜಗಕೆ ನೀನಾಧರ ಜನ್ಮ ಮೃತಿಭಯದೂರಚಾಗಮಾಗಮವಿಚಾರ ನಿತ್ಯಶೂರಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆಮಗುಚಬೇಡೈ ಧರೆಯ ಮುಗಿವೆ ನಾ ಕೈಯ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ