ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಾರತಿ ನೋಡೈ ಜಗದೇಕನಾಥ ಪ ನಾಕೊಡುವೆನು ತ್ರಿಲೋ ಕೈಕ ರಕ್ಷಕ ಸ್ವಾಮಿ ಅ.ಪ ಘೃತವರ್ತಿತ್ರಯ ವಂಹ್ನಿಯುತವಾದ ಮಂಗಳಾ- ರತಿಯ ಸ್ವೀಕರಿಸು ಶ್ರೀಪತಿ ಪುರುಷೋತ್ತಮ 1 ಘೋರಾನರಕ ತ್ರಾತ ದಿವ್ಯ ಜ್ಯೋತಿ ರೂಪನೆ 2 ಮೋದವಿತ್ತೆಂಥಾ ಗುರುರಾಮ ವಿಠಲ ತಂದೆ 3
--------------
ಗುರುರಾಮವಿಠಲ
ತೇನಮೋ ಜಗದೇಕನಾಥ ರಮಾ ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ ಜಗದೇಕವೀರ ಜನನಾದಿ ದೂರಾ ಸುಗುಣ ವಿಸ್ತಾರ ಸುಖಮಯ ಶರೀರ 1 ಗಾನರಸಲೋಲ ಕನಕಮಯಚೇಲ ಆನತೋದ್ಧರಣ ಅಮೃತಾಬ್ಧಿಶಯನ 2 ಚಂದ್ರಾರ್ಕನಯನ ಚಾರುತರ ಕಥನ ಇಂದ್ರಾರಿ ಮಥನ ಇಭವೈರಿವದನ ಇಂದ್ರ ಸಂಕ್ರಮಣ ವೇಲಾಪುರಿಸದನ ವಂದ್ಯಾಖಿಲಜನ ವೈಕುಂಠ ರಮಣ3
--------------
ಬೇಲೂರು ವೈಕುಂಠದಾಸರು
ಶಿವಮಂಗಳಂ ಸದಾಶಿವ ಮಂಗಳಂಮಂಗಳಂ ರಜತಾದ್ರಿ ಮುಖ್ಯನಿಲಯಾಯ ಪಹಿಮಕರಾವತಂಸಾಯ ಹಿಮರುಚಿರಕಾಯಾಯಹಿಮರೂಪಗಿರಿಚಿತ್ತ ಹಾರಕಾಯಹಿಮಹರಾಮಿತಕಾಂತಿ ಸದೃಶಾಯ ಸೌಮ್ಯಾಯಹಿಮತಾಪರಹಿತಾಯ ಹೇಮವರ್ಣಾಯ 1ವರಜಟಾಮಕುಟಾಯ ವಾರಿಯುತಕೇಶಾಯಸ್ಫುರದಿನಾನಲಸೋಮಲೋಚನಾಯಗರನೀಲಕಂಠಾಯ ಕದ್ರುಸುತ ಹಾರಾಯಪರಶು ಮೃಗ ಶೂಲಾದಿ ಪರಮಾಯುಧಾಯ2ನಾಗೋಪವೀತಾಯ ನಾಗೇಶ ವಲಯಾಯನಾಗಧವಳಾಂಗಾಯ ನಾಯಕಾಯನಾಗವಾಹನ ಮುಖ್ಯ ನಾಕಜನನಾಥಾಯನಾಗಪರ್ಯಂಕಸ್ಥ ನಿತ್ಯಮಿತ್ರಾಯ 3ಗೌರೀಧೃತಾಂಗಾಯ ಗಂಧರ್ವಸೇವ್ಯಾಯಭೂರಿ ಗುಣಬ್ರಹ್ಮಾಂಡ ಭೂತಾಯಚಾರು ಕಟಿ ಶುಭ ಜಂಘಾಯನೀರಜಾಮಲ ಪೀಠ ನಿಹಿತ ಪಾದಾಯ 4ಮೃಗಚರ್ಮವಸನಾಯ ಮಂಜುಳ ಮಯೂಖಾಯಜಗದೇಕನಾಥಾಯ ಜೀವನಾಯಸುಗಮ ತಿರುಪತಿ ನಾಮ ಸದ್ಮಾಧಿನಾಥಾಯಗಗನಧುನಿ ಗಿರಿ ವಾಸ ಗಂಗಾಧರಾಯ 5 ಓಂ ನವನೀತನವಾಹಾರಾಯ ನಮಃ
--------------
ತಿಮ್ಮಪ್ಪದಾಸರು
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ