ಆರ ನಂಬುಗೆ ಜಗದೆನಗಿಲ್ಲ ಹರಿಯೆ
ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ
ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು
ಗಂಡನೇ ಗತಿಯೆಂದು ಮಂಡೆಯನು ಬಾಗಿ
ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ
ಬಂಡುಮಾಡುವಳಿಹ್ಯದಿ ಷಂಡನೆಂದಭವ 1
ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ
ವಂದಿಸಿ ನುಡಿಯುವರು ತಿಂದುಡುವನತಕ
ಸಂಧಿಸಲು ಬಡತನವು ವಂದಿಸಿದವರೆ ಮನ
ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ 2
ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು
ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು
ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ
ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ 3