ಭಕ್ತಿ ಗೀತಾವಳಿ
ಸರಸ್ವತಿ ಸ್ತುತಿಗಳು
1
ಜಯ ಜಯ ಜನನಿ ಜಗದುಜ್ಜೀವಿನಿ ಪ
ಜಯ ಬ್ರಹ್ಮಾಣಿ ಅ.ಪ
ಆವಳ ಕೃಪೆಯಿಂ ಜೀವಿಪೆಮೋ ಮ
ತ್ತಾವಳ ವ್ಯಾಪನೆಯಿಂ
ದೈವಿಕ ಗುಣಸಂಭಾವಿತರಪ್ಪೆವೋ
ಭಾವಿಪೆವಾದೇವಿಯ ನಾವ್ 1
ಉಡುವುದು ತೊಡುವುದು ಕೊಡುವುದು
ಹಿಡಿವುದದಾರಿಂದಂ
ನುಡಿವೆಣ್ಣೆನಿಸಿದವಳಾವಳೋ ನಾವವ
ಳೆಡಬಿಡದೆರೆವೋಂ 2
ತಾಯೆಮಗರಿವಂ ಕಾಯಕೆಬಲಮಂ
ಮಾಯೆಯೆ ಬಿಡಿಸಿನ್ನು
ಕಾಯಜಪಿತ ಶೇಷಾದ್ರೀಶನೆ
ನೆನೆವಾಸನ್ಮತಿಯೆಂದೆಂದುಂ 3