(ಅ) ಶ್ರೀಹತಿಸ್ತುತಿಗಳು
ಜಗದುದರನು ಹರಿ ಸೂತ್ರಧಾರಂ
ನಗಿಸುವ ಅಳಿಸುವ ಕಾರಕನಿವ ತಾಂ ಪ
ಪರಿಪರಿ ಸೃಷ್ಟಿಸುತಾ ಸಲಹುವನು
ಅರಿವಿಂದವುಗಳ ಲಯಗೈಸುವನು
ಭರಿತನು ಸಕಲ ಚರಾಚರಂಗಳಲಿ
ನಿರುತವೆಲ್ಲ ತರತಮದಿಂದಾರಿಸಿ
ಇರುವನು ಪರಮಾತ್ಮನು ಸರ್ವೇಶಂ 1
ನಿತ್ಯನಿರ್ಮಲನು ಸತ್ಯಸನಾತನು
ಅತ್ಯಂತನು ಗುರುವನಂತನು
ಮೃತ್ಯುನಿಯಾಮಕ ಮುಕ್ತಿಪ್ರದನು
ಭೃತ್ಯವರ್ಗ ಸಂರಕ್ಷ ಶಕ್ತನು
ಮತ್ತೊಂದಕು ಸಹ ಮೂಲನು 2
ಅಣೋರಣೀವನು ಮಹತೋಮಹೀಮನು
ಗುಣಗಣಭರಿತನಗಣ್ಯನು
ಕ್ಷಣಮಾದಲನು ಕಂಟಕನು ಕಾಲನು
ತೃಣಮೊದಲು ಬ್ರಹ್ಮಾಂಡನು ಧೀರನು
ಘನಮಹಿಮನು ಶ್ರೀ ಜಾಜೀಶಂ 3