ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಡಲೆರಡಂತೆ ಅಸುವೊಂದಂತೆ ನುಡಿಯಿದು ನಿಜವೇ ಪೇಳೇ ಗೋಪಮ್ಮ ಪ ನಡೆ ನುಡಿ ಭಾವಗಳೊಂದೇಯಂತೆ ಹುಡುಗನೇನೇ ಕೃಷ್ಣ ಪೇಳೇ ಗೋಪಮ್ಮ ಅ.ಪ ಸೋದರಿಯರು ಇದ ಹೇಳುವರಮ್ಮ ನಾದ ನರ್ತನ ದೇಹಕಾಂತಿಗಳಲ್ಲಿ ಭೇದವಿಲ್ಲೆಂಬರು ನಿಜವೇನಮ್ಮಾ 1 ಬಾಲೆಯು ತಾನೆ ಗೋಪಾಲನೆನುವಳಂತೆ ಬಾಲಕೃಷ್ಣನು ರಾಧೆ ತಾನೆಂಬನಂತೆ ಬಾಲನಾರಿದರಲ್ಲಿ ಬಾಲೆಯಾರಿವರಲ್ಲಿ ಮೂಲತತ್ವವ ನೀನೆ ಹೇಳೇ ಗೋಪಮ್ಮ 2 ಯುಗ ಯುಗದಲ್ಲಿ ತಾನವತರಿಸುವ ಕೃಷ್ಣ ಜಗದೀಶ್ವರನೆ ತಾದಿಟವಮ್ಮ [ಮಿಗೆ] ಭಾಗ್ಯವೆ ನಿನ್ನದಾಗಿಹುದಮ್ಮ 3 ನಿರುಪಮ ಭಕ್ತಿಯಮೂರ್ತಿಯು ರಾಧೆ ಮುರಳೀಧರನಲಿ ಒಂದಾಗಿಹಳು ಅರಿತುದ ಪೇಳ್ವೆನು ಮಾಂಗಿರಿರಂಗನ ಶರಣರಿಗೀತತ್ವ ಕರಗತವಮ್ಮಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಥಾಣುಮಹೇಶ್ವರ ತ್ರಿನಯನ ||ಶಂಕರ||ಮಾಣದೆಸಲಹೋ ರುದ್ರಾಣಿ ಮನೋಹರ ಪಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆಭವ| ಭೀತಿವಿನಾಶನೆ |ಪಾತಕಹರಸುರ | ವ್ರಾತಾನಮಿತನೆ ಚಭೂತಳದೊಳಗೆ ಸರ್ವಾರ್ಥರಕ್ಷಕನೆಂದು |ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ 1ರುದ್ರಚಮಕಗಳಿಂದ | ಲಭಿಷೇಕವಗೈದು |ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ |ಪ್ರದೋಷದ ವ್ರತವರಿಯೆನ್ನುದ್ಧರಿಸೊ 2ಸುಗುಣಶರಧಿಲಿಂಗ | ಪೂಜೆ ವಿನೋದಿತ |ಮೃಗದ ನೆವದಿ ಪಾರ್ಥಗೊಲಿದಕೈರಾತ|ಜಗದೀಶ್ವರನೆ ಗೋವಿಂದನಸಖನಿನ್ನ |ಮೊಗವ ತೋರಿಸುದಾಸಗೊಲಿದು ನೀ ದಯದಿ 3
--------------
ಗೋವಿಂದದಾಸ