ನಿನ್ನ ಸಂಕಲ್ಪಾನುಸಾರ ಮಾಡೋ
ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡೋ ಪ
ಪಾತ್ರನೆಂದೆನಿಸೋ ಬಹು ಪಾಪಾತ್ಮನೆಂದೆನಿಸೋ
ಶ್ರೋತ್ರೀಯನೆಂದೆನಿಸೋ ಶುಂಠನೆನಿಸೋ
ಪುತ್ರಮಿತ್ರಾದ್ಯರಿಂ ಬಯಸಿ ಪೂಜೆಯಗೈಸೋ
ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ 1
ಜನರೊಳಗೆ ನೀನಿದ್ದು ಜನ್ಮಗಳಲ್ಲಿ
ಗುಣಕಾಲಕರ್ಮ ಸ್ವಭಾವಂಗಳಾ
ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ
ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು 2
ಯಾತಕೆನ್ನನು ಇನಿತು ದೂಷಕನ ಮಾಡುವಿ ಧ
ರಾತಲದೊಳನುದಿನದಿ ಮಾಯಾಪತೇ
ಭೀತಿಗೊಂಬುವನಲ್ಲ ಭಯನಿವಾರಣ ಜಗ
ನ್ನಾಥ ವಿಠ್ಠಲ ಜಯಪ್ರದನೆ ಜಗದೀಶಾ3