ಅಂಕಿತ-ತಾತ ಮಹಿಪತಿ
ದಯಾಕರಾ | ಶ್ರೀಕರಾ |
ಭಯ ಪರಿಹಾರಾ | ಜಗದೋದ್ಧಾರಾ ಪ
ವನಜನಯನ ಪಾವನ ಕೃತಲೀಲಾ |
ವನ ನಿಧಿ ಶಯನ ಸುವನ ಜಾಲೋಲಾ |
ವನಜ ಸುಚರಣಾ ವನನರಪಾಲಾ |
ವನಜ ಭವಾರ್ಚಿತ ವನಶುಭ ಮಾಲಾ1
ಹರಿಕೇಶವ ನರಹರಿ ಸರ್ವೇಶಾ |
ಕರಿ ಹರಮುನಿ ಪೋಷಾ |
ಹರಿಕುಲ ತಿಲಕ ವಿಹರಿಜಿತ ಭಾಸಾ |
ಹರಿಚರರಿಪು ಸಂಹರ ಜಗದೀಶಾ2
ಗಿರಿಧರ ವಾಮನ ಗಿರಿರಿಪು ತಾತಾ |
ಗಿರಿಧರ ಪರಿಶತ ಗಿರಿವರ ಪ್ರೀತಾ |
ಗಿರಿಧರ ತನುಭವ ಗುರುವಿಖ್ಯಾತಾ |
ಗಿರಿಮಾ ವೆಂಕಟ ಗಿರಿಧರ ದಾತಾ 3
ಅಂಕಿತ-ವೆಂಕಟ ಗಿರಿಧರ (?)