ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನ ತೂಗಿದಳು ಯಶೋದೆ ಕಂದನ ತೂಗಿದಳು ಪ ಇಂದಿರಾರಮಣನ ಅಂದವದನದಲಿ ಮಂದಹಾಸವ ನೋಡಿ ನಂದದಿ ಹಿಗ್ಗುತ ಅ.ಪ ತಾಮರಸಾಕ್ಷನ ಕೋಮಲಾಂಗವ ನೋಡಿ ಆ ಮಹಿಳೆಯು ಬಲು ಪ್ರೇಮಭರಿತಳಾಗಿ 1 ಜಗಜಗಿಸುವ ನವಮಣಿಯ ತೊಟ್ಟಿಲಲಿ ಜಗದೀಶನು ತನ್ನ ಮಗನೆಂದು ತಿಳಿಯುತ 2 ಪದಮನಾಭನನು ಹೃದಯದಿ ನೆನೆಯುತ ಮದದಿಂದಲಿ ದಿವ್ಯ ಪದಗಳ ಪಾಡುತ 3 ಲಕ್ಷ್ಮೀಶನು ಇತ್ತ ಪುತ್ರಭಿಕ್ಷೆಯೆಂದು ಅಕ್ಷಿಗಳಲಿ ಸುಖಬಾಷ್ಪವ ಸುರಿಸುತ 4 ತನ್ನ ಸೌಭಾಗ್ಯವು ಅನ್ಯರಿಗಾವುದೆಂದು ಸತಿ 5
--------------
ವಿದ್ಯಾಪ್ರಸನ್ನತೀರ್ಥರು
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ನೋಡು ನಿನ್ನೊಳು ನೀ ನೋಡು | ಸಾಕು ಸಾಕು ಈ ಲೋಕದ ನಡವಳಿ | ಯಾಕಬೇಕು ಪಿನಾಕಿಯ ಭಜಿಸೋ ಪ ಅಗಣಿತ ಸಂಪದ ಕೈಗೂಡುವದೋ ಅದ | ಬೇಡದೆ ಬೇಗನೆ 1 ಘಾಸಿ ಕ್ಲೇಶ ಬಡುವಿ ಜಗದೀಶನು ಒಲಿವನೆ ? 2 ಹಿಂದೆ ಜನ್ಮ ನೊಂದೆ ಸದ್ಗತಿ ಪಡೆಯದೆ | ಮುಂದೆ ಸಾಧಿಸು ಶಿವ ತತ್ತ್ವವ ಒಂದೇ | ತಂದೆ ಸದ್ಗುರು ಭವತಾರಕನಂಘ್ರಿಯ |ಹೊಂದಿ ನಿಜಾನಂದ ಬೋಧದಲಿರು ನೀ3
--------------
ಭಾವತರಕರು