ಒಟ್ಟು 9 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ಹರಿಯ ಸ್ತುತಿ ಕೃತಿ ಆಗಿ ಹೋಗುವುದು ಜಗದೀಶನಾಕೃತಿಯು ಅಗಾಧವಿಹುದೈಯ್ಯ ಪ ಮಂದರೋದ್ಧರನಾಜ್ಞೆಯಿಂದ ಬ್ರಹ್ಮನು ತಾನು ಇಂದಿಗೆ ಸೃಷ್ಟಿ ಮಾಡುವುದಿಲ್ಲವೇನು ಇಂದೀವರಾಕ್ಷ ಮುಕುಂದನ ದಯದೀ ಪಾಂಡುನಂದನನು ಅಶ್ವಮೇಧವ ಮಾಡಲಿಲ್ಲೇ 1 ಹರಿಯ ಕೃಪೆಯಿಂದಲಿ ವರದಂಜನೇಯ ಸುತನು ಗುರು ರಾಮನಾ ಸತಿಯ ಅರಸುವುದಕ್ಕಾಗಿ ಪರಮ ದುರ್ಲಭವಾದ ಶರಧಿಯನು ಹರುಷದಲಿ ಸಿರಿನಾಮ ಸ್ಮರಿಸಿ ಹಾರಲಿಲ್ಲೇನೋ2 ಧನಭೂಮಿ ಕನ್ಯಾಗ್ರಹದಾನ ಕೊಡಲದಕೆ ಹರಿ ಅನುಕೂಲವಾದಷ್ಟೇ ಫಲಕೊಡುವನು ಮನವನೊಪ್ಪಿಸಿ ಗತಿ ಎಂದು ನೆನೆದವರಿಗೆ ಘನ ಮುಕ್ತಿಯನು ಕೊಡುವ ಹನುಮೇಶವಿಠಲ 3
--------------
ಹನುಮೇಶವಿಠಲ
ಕಂಡೆ ಕಮಲನಾಭನ ಕಣ್ಣಾರೆ ಪುಂಡರೀಕನ ಪಾಲಿನ ಪಂಡರಿವಾಸನ ಸಕಲ - ಬೊ ಮ್ಮಾಂಡವ ಧರಿಸಿದನಾ ಪ ಸುಲಭ ದೇವರ ದೇವ ನಾನಾ - ಪರಿ ಮಳ ತುಲಸಿಗೆ ವಲಿವನ ಕಲಿಕಾಲ ಸಲಹುವನ ಭವದ - ಸಂ ಕಲೆ ಪರಿಹರಿಸುವನ 1 ಲಿಂಗ ಸಂಗವನೀವನ ಜಗದಂತರಂಗ ಮೋಹನರಾಯನ ಮಂಗಳ ದೇವೇಶನ ಸಿರಿಪಾಂಡು ರಂಗ ನೆನಸಿಕೊಂಬನ2 ಜಗದ ಸದ್ಭರಿತ ನಾನಾ ವನದಿ ಬಿಗಿದ ಪರಾಕ್ರಮನಾ ನಗವನೆತ್ತಿದ ಧೀರನಾ ತನ್ನನು ಪೊಗಳಲು ಹಿಗ್ಗುವನಾ 3 ಯಾದÀವ ಶಿರೋರನ್ನನ ಕೊಳಲು ಊದುವ ಚೆನ್ನಿಗನಾ ವೇದ ನಿಕರಮಯನಾ 4 ಇಟ್ಟಿಗೆಯಲಿ ನಿಂದನ ವರಂಗಳ ಕೊಟ್ಟರೆ ತಪ್ಪದವನ ಅಟ್ಟಿ ಖಳನ ಕೊಂದನಾ ವಿಜಯ ವಿಠ್ಠಲ ಜಗದೀಶನಾ 5
--------------
ವಿಜಯದಾಸ
ಜಯ ಮಂಗಳಂ ಸತ್ಯಧೀರತೀರ್ಥರಿಗೆ ಶುಭಮಂಗಳಂ ಯತೀ ಗುಣಮಣಿಗೆ ಪ ಜಗದುದರಧರನಾದ ಜಗವ ಸೃಷ್ಟಿಸಿದಂಥ ಜಗವ ಪಾಲಿಸುವ ಶ್ರೀ ಜಗದೀಶನಾ ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ ರಘುವರನ ದಿವ್ಯ ಚರಣಗಳ ಸೇವಿಪಗೆ 1 ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ- ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು- ದ್ರೆಗಳನೇ ಇತ್ತು ಪಾಪಗಳ ತರಿದವಗೆ 2 ಸತ್ಯವೀರರು ಕರಗಳೆತ್ತಿ ಉತ್ತಮಪದವ ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ- ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ 3 ಪುರಕಾಶಿಯಿಂದ ರಾಮೇಶ್ವರದ ಪರಿಯಂತ ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ ಸಿರಿರಾಮನಾಶ್ರಯದಿ ಜನಿಸಿ ಬಂದವಗೆ 4 ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ ಶರಣುಬಂದವರ ಪರಿಪಾಲಿಸುವಗೆ ವರಗುರು ಮಧ್ವರಾಯರ ಪೀಠಪಾತ್ರಗೆ ಧೀರ ಹನುಮೇಶವಿಠಲ 5
--------------
ಹನುಮೇಶವಿಠಲ
ನೋಡಿದೆನು ಭದ್ರಾಚಲವಾಸನ | ನೋಡಿದೆನು ಜಗದೀಶನಾ ನೋಡಿದೆನು ಶ್ರೀ ಸೀತಾರಮಣನ | ನೋಡಿದೆನು ಸರ್ವೇಶನಾ ಪ ಅಂಗನೇಯರ ಕೂಡಿ ನಾನು ಮಂಗಳಗಿರಿನೋಡಿದೆ ಮಂಗಳಾಂಗಾ ನಾರಸಿಂಹಗೆ ತಂದು ಪಾನಕ ನೀಡಿದೆ 1 ಸಜ್ಜನರಿಂದ ಕೂಡಿ ನಾನು ಬೆಜ್ಜವಾಡವ ನೋಡಿದೆ ಮೂರ್ಜಗ ಪಾವನಿಯ ಕೃಷ್ಣೆಯ ಮಜ್ಜನವು ನಾ ಮಾಡಿದೆ 2 ಮಾಧವನ ದಯದಿಂದ ನಾನು ಗೋದಸ್ನಾನವು ಮಾಡಿದೆ ಮೋದದಿಂದಲಿ ಬಂದು ವಿಮಾನರಾಮನ ನೋಡಿದೆ 3 ನೇಮದಿಂದಲಿ ಬಂದು ನಾನಾ ರಾಮದಾಸನ ನೋಡಿದೆ ವಾಮಭಾಗದಿ ಕುಳಿತ ಲಕ್ಷ್ಮಣ ಸ್ವಾಮಿ ದರುನ ಮಾಡಿದೆ 4 ಸಪ್ತಋಷಿಗಳು ದಶರಥಾದಿ ಉತ್ತಮರ ನಾ ನೋಡಿದೆ ಸುತ್ತು ಮುತ್ತು ದೇವತೆಗಳನಾ ಮತ್ತೆ ಮತ್ತೆನಾ ನೋಡಿದೆ 5 ದೋಷದೂರ ಭದ್ರಾಚಲದಿವಾಸ ರಾಮಚಂದ್ರನ ಸೋಸಿನಿಂದಲಿ ಬಂದು ನಾ ವಿಶೇಷ ದರುಶನ ಮಾಡಿದೆ 6 ಕಡುಹರುಷದಿಂದಲಿ ರಾಮನ ತೊಡೆಯಮ್ಯಾಲೆ ಒಪ್ಪಿದ ಮಡದಿ ಸೀತಾದೇವಿಯನ್ನು ಸಡಗರದಿ ನಾ ನೋಡಿದೆ 7 ಇಷ್ಟದಿಂದಲಿ ಭಜನೆಗೊಳ್ಳುವ ಶ್ರೇಷ್ಠ ರಾಮನ ನೋಡಿದೆ ಉಷ್ಣಕುಂಡದ ಸ್ನಾನವನ್ನು ಥಟ್ಟನೇ ನಾ ಮಾಡಿದೆ8 ಉನ್ನತವಾಗಿರುವ ಸುವರ್ಣಗೋಪುರ ನೋಡಿದೆ ಮುನ್ನ ಮಗ್ನವಾಗಿರುವ ಅನ್ನ ಛತ್ರದ ನೋಡಿದೆ 9 ಪರ್ಣಶಾಲೆಯನ್ನು ನೋಡಿ ಪರಮ ಹರುಷವ ತಾಳಿದೆ ನಿರ್ಮಲ ಚರಿತ್ರ ರಾಮನ ವರ್ಣಿಸಲಳವಲ್ಲವೆ 10 ಲಕ್ಷ್ಮೀವಲ್ಲಭ ರಾಮನ ಪ್ರತ್ಯಕ್ಷಮದಿವೆಯ ನೋಡಿದೆ ನಾ ನೋಡಿದೆ 11 ಚಂದ ಚಂದಾ ಜನರು ಎಲ್ಲಾ ಆನಂದದಿಂದಲಿ ತಂದು ತಂದು ಹಾಕುವಂತಹ ಚಂದವನು ನೋಡಿದೆ 12 ಇಂತಹ ರಾಮನವಮಿ ಉತ್ಸವ ಲೋಕದಲಿ ನಡೆವುದು ಹತ್ತುವದನ ಶೇಷನಿಗೂ ಸಹಾ ತಪ್ಪದೇ ಎಣಿಸಲಾಗದು 13 ನಮ್ಮವಾಯು ಸುತನ ಪಾದಕೆ ಸುಮ್ಮನೇನಾನೆರಗಿದೆ ಘನ್ನ ಮಹಿಮನ ಪ್ರಸನ್ನ ಸೀತಾರಾಮನನು ನಾ ನೋಡಿದೆ 14 ತೇರನೇರಿ ಬರುವ ರಾಮನ ವೈಯಾರವನು ನಾ ನೋಡಿದೆ ಮೇರು ನಂದನ ಭದ್ರಾಚಲದಿ ವಿಚಾರ ಮಾಳ್ಪುದ ನೋಡಿದೆ 15 ಪ್ರಹ್ಲಾದವರದ ನಾರಸಿಂಹ ವಿಠಲನ ಎಲ್ಲ ಉತ್ಸವ ನೋಡಿ ಮನಕೆ ಆಹ್ಲಾದವನೆ ನಾ ಪಾಡಿದೆ 16
--------------
ಓರಬಾಯಿ ಲಕ್ಷ್ಮೀದೇವಮ್ಮ
ಮೀರಲುಬಹುದೆ ದೈವ ಸಂಕಲ್ಪವ ಪ ಮಾರಮಣನ ಘನ ಮನಕೆ ಬಂದುದನು ನಿ ವಾರಿಸಿ ನಡೆಯಲಾ ಆರಿಗೆ ಸಾಧ್ಯವು ಅ.ಪ. ಪುತ್ರರÀ ಬಯಸಲು ಮತ್ತೆ ವಂದ್ಯಳು ಸತಿ ವಿತ್ತ ಬಯಸೆ ಶುಕ್ಲ ವೃತ್ತಿಯೆ ಗತಿಯು 1 ಆಲಯದೊಳು ಜನನ ಆಗಬೇಕೆಂದರೆ ಕಾಲನಾಮಕನಿಚ್ಛೆ ಅನ್ಯತ್ರವಿಹುದು 2 ಜನನ ಮರಣಗಳು ಜಗದೀಶನಾಧೀನ ವನಜನಯನ ಶ್ರೀ ಕರಿಗಿರೀಶನ ಚಿತ್ತ 3
--------------
ವರಾವಾಣಿರಾಮರಾಯದಾಸರು
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಕ್ಷಿ ರಕ್ಷಿ ರಕ್ಷಿಸಯ್ಯ ಚಿದಾನಂದ ಸ್ವಾಮಿರಕ್ಷ ಶಿಕ್ಷ ಕರ್ತನಾದ ದಯದಿಂದಪದಾಸ ನಿಜವಲ್ಲವೆನೆ ಸಾಕ್ಷಿ ಬೇಕೆ ನಿನ್ನದಾಸರ ದಾಸನಾಗಲಿಕೆಏಸುಕಾಲ ಪರೀಕ್ಷೆ ನಿನ್ನ ನೋಡಲಿಕೆ ಎನ್ನಲೇಸುಹೊಲಬುನಿನ್ನನು ಬಿಡದು ಜೋಕೆ1ನಿನ್ನ ನೋಡೆ ನಾನು ಬೇರೆಯಲ್ಲವಯ್ಯಇದು ಮಾಡಿ ಬಂದ ಸುಕೃತವೇಯೆಲ್ಲನಿನ್ನವನ ನೀನೆ ಕೈವಿಡಿದೆಲ್ಲ ಕೇಳುನಿನ್ನೊಳಗೆನ್ನೊಳಗೆ ಭೇದವೇನೂ ಇಲ್ಲ2ಖೂನವಿಲ್ಲದ ಖೂನದಿಂದ ನಿನ್ನ ಕಂಡೆ ನಾಖೂನವಿದ್ದೂ ವಿಲ್ಲದಂತೆ ಬಲಗೊಂಡೆಧ್ಯಾನ ಮೌನವೆಲ್ಲವ ನಾ ಕಳಕೊಂಡೆಧ್ಯಾನವೆಂತು ನಿನ್ನನೆ ಭಜನೆಗೊಂಡೆ3ನಿನ್ನ ಪಾದವ ನಂಬಿಯೆ ಸಂತೋಷನಾದೆ ನಾನಿನ್ನ ಪಾಡಿ ಪೊಗಳಿ ವಿಶೇಷನಾದೆನಿನ್ನ ಲೀಲೆ ನೆನೆದು ನಾನೀಶನಾದೆನಿನ್ನ ನೋಡಿಯೆ ಕಂಡು ಜಗದೀಶನಾದೆ4ಕೋಟಿ ಶತಶಶಿ ಪ್ರಭೆಯ ತಾಳ್ದ ಅಂದವನ್ನುಪಾಟಿಸಿ ಪೊಗಳಬಲ್ಲೆನೆ ಮುಂದಾನೀಟೆನಿಪದೇವಗುರುಚಿದಾನಂದ ನಿನ್ನನೀಟಿನಂತೆ ನಿಲ್ಲಿಸು ಕರುಣದಿಂದ5
--------------
ಚಿದಾನಂದ ಅವಧೂತರು