ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ಪ
ಮೋದವ ಕೊಡುವದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆಅ.ಪ
ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ
ಮೋದಮುನಿಯ ಸುಮತೋದಧಿಚಂದಿರ
ಗಜ ಮೃಗಾಧಿಪರೆನಿಸಿದ 1
ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ ಗ್ರಂಥದಿ ಚಮ
ತ್ಕøತಿ ತೋರಿದ 2
ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ
ಯೋಗಿವರ್ಯ ಕವಿಗೇಯ ದಯಾಕರ
ಭೋಗಪುರೀಶನ ರೋಗವ ಕಳೆದಿ 3
ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ
ರಾಜೀವ ಯುಗಲ ಪೂಜಿಸಿ ಜಗದಿವಿ
ರಾಜಿಸಿದಂಥ 4
ಪಾತಕ ಪರಿಹರಿಸಿ
ನರಮೃಗ ನಾಥನ ಪರಮ
ಪ್ರೀತಿಯ ಪಡೆದಿ 5