ಮಾಧವಮಧುಸೂದನೆನಿಪಪಾದಭಜನೆಯಮಾಡುವೇ
ಸಾಧು ಶಿಖರನೆ ಸರ್ವತಂತ್ರನೇ ಬೋಧಿಸೆನುತಾ ಬೇಡುವೇ ಪ
ವಾರಿಧಿಶಯನ ಪಾರಮಹಿಮ ಪರಾತ್ಪರ ಪಾಪವಿದೂರನೇ ಅ.ಪ
ಆತೊಡರ್ಚಿತುವೋತಡಂತಿಸೂ ಭೂತಪಕ್ಷದಯಾನಿಧೆ
ಭೀತಿಗೊಳಿಸದಿರೆನ್ನ ನೀನೆ ಅನಾಥರಕ್ಷ ಕೃಪಾನಿಧೇ 1
ನೀನೆ ಕಲುಷವಿಖಂಡ ನಿಶ್ಚಲ ನೀನೆ ವೇದಾಂತಾರ್ಯನೂ
ಶ್ರೀನಿವಾಸದಯಾನಿಧೆ ಜಗದಾನುಭವತತ್ತೂರ್ಯನೂ 2
ದೇಶಿಕನೆ ತ್ವದ್ದಾಸನಾಡೆಯ ಆಶೆಯಳಿದೀಗೆರಿನನೂ
ಪಾಶರಹಿತನ ಮಾಡೊಯೆನುತಲಿ ಪಾಡುವೆನಾ ನಿನಗೆನ್ನನೂ 3
ನಿತ್ಯಪೂರ್ಣನೆ ಸತ್ವಗುಣಮಣಿ ಚಿತ್ಸುಖಾಂಶ ಚಿದಂಬರಾ
ತತ್ವಮೆನಗೆ ಪ್ರಸಾದಿಸಿದ ಶ್ರೀತುಲಶಿರಾಮ ದಿಗಂಬರಾ 4