ಸರ್ವಸಾರಭೋಕ್ತ ಸಕಲ ಮಂಗಲದಾಯಿ ವೆಂಕಟೇಶ
ನಿರ್ವಹಿಸುವವ ನೀನೆ ನಿತ್ಯಕರ್ಮಗಳಿಂದ ವೆಂಕಟೇಶ ಪ.
ದೇವರ್ಷಿ ಪಿತೃಗಣರೊಳಗಿದ್ದು ರಾಜಿಪ ವೆಂಕಟೇಶ
ಭೂವರರಲ್ಲಿ ವಿಭೂತಿರೂಪನು ನೀನೆ ವೆಂಕಟೇಶ
ಸೇವಕ ಜನರನು ಸುಲಭದಿ ಸಲಹುವ ವೆಂಕಟೇಶ
ಪಾದ ಪದ್ಮವೆ ಗತಿ ಎಂಬೆ ವೆಂಕಟೇಶ 1
ಇಂದಿರಾಧವ ಯದುನಂದನನೆನಿಸಿದೆ ವೆಂಕಟೇಶ
ಸುಂದರ ವಿಗ್ರಹ ಸುಗುಣೇರ ಒಲಿಸಿದೆ ವೆಂಕಟೇಶ
ಹಿಂದೆ ಮುನ್ನ ಭವದಂದವನರಿಯೆನು ವೆಂಕಟೇಶ
ಮಂದಮತಿಯ ಕರ್ಮಕುಂದನು ಕ್ಷಮಿಸಯ್ಯ ವೆಂಕಟೇಶ 2
ಸ್ವೋದರಗತ ಜಗದಾಧಾರಗುಣನಿಧಿ ವೆಂಕಟೇಶ
ಭೂಧರಗಿರಿವರ ಶೋಭಿತ ಮೂರುತಿ ವೆಂಕಟೇಶ
ಶ್ರೀಧರಾಕಾಂತ ನಿನ್ನಾಧಾರ ನಂಬಿದೆ ವೆಂಕಟೇಶ3