ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ಪರಿ ಪೋಷಕ ತ್ವಂ ಪ ಮಾ ಕಮಲಾಸ ದಿವೌಕಸ ಪ್ರೇರಕ ಏಕಮೇವ ಜಗದಾಧಾರಕಾ 1 ಅನಿರುದ್ಧ ಮುಕುಂದಾ 2 ನಾಭಿ ಪದ್ಮ ಸುನಿಕೇತನ ಪ್ರದ್ಯುಮ್ನಾಭಿಧ ಷಣ್ಮಹಿಷಿಯರರಸಾ 3 ಅಷ್ಠ ದಳಗಳಲಿ ವಸುದಿಕ್ಷತಗಳಅಷ್ಟ ನಿಯಂತ ಸಂಕರುಷಣನೇ 4 ಎರಡು ದಶವು ದಳ ಸರಸಿವಾಸನೆಎರಡಾರರ್ಕರ ನಿಯಾಮಕ ಹರಿಯೆ 5 ಎರಡೆಂಟರ ದಳ ಇಂದ್ರ ಯೋನಿಯಲಿಉರಗೇಶಣ ನಾರಾಯಣನೇ 6 ಖಗ ವಾಹನನೇ 7 ಪದುಮ ಸಾಸಿರ ದಳ ವಸನೆ ಈಶಾಪದುಮಜ ಪೋಷಕ ವಾಸುದೇವಾ 8 ಸಪುತ ಚಕ್ರದಲಿ ವ್ಯಾಪಿಸಿ ಪೊರೆಯುವಖಪತಿಗಮನ ಗುರು ಗೋವಿಂದ ವಿಠಲಾ 9
--------------
ಗುರುಗೋವಿಂದವಿಠಲರು
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ