ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಾದಿಮಾತೆಯೆ ಪ ಮೊರೆಯ ಕೇಳಮ್ಮ ಪರಮ ಪಾವನೆಯೆ ಕರುಣ ಹಸ್ತವ ಶಿರದಿ ಇಡು ದಯೆ ಭರಿತೆ ಜಗನ್ಮಯೆ ಅ.ಪ ಕಮಲಜಾತನ ಪ್ರೇಮ ಸುಂದರಿಯೆ ಅಮರ ವಿನುತೆಯೆ ಕಮಲನೇತ್ರೆ ಸಾವಿತ್ರಿ ಶಾರದೆಯೆ ವಿಮಲಚರಿತಳೆ ದಮೆ ದಯಾನ್ವಿತೆಯ ಶಮೆ ಶಾಂತಿನಿಲಯೆ ಕುಮುದಬಾಂಧವಕೋಟಿಪ್ರಭಾಮಯೆ 1 ವರ ಸುವಿದ್ಯ ಸಂಗೀತ ಶರ್ವಾಣೆ ಪರಮಕಲ್ಯಾಣೆ ಶರಣ ಜನಪ್ರಿಯೆ ವೀಣಾಧರಪಾಣಿ ಸ್ಮರಿಪ ಜನ ಮನದಿಷ್ಟ ಪರಿಪೂರ್ಣ ದುರಿತದೂರಿಣೆ ಪೊರೆದೆ ಮನುಗಳ ಜ್ಞಾನದಿಂ ವಾಣಿ 2 ಚರಣದಡಿಲೆನ್ನ ಶಿರವನಿಕ್ಕಿ ಬೇಡಿಕೊಂಬುವೆ ನಾ ಮರೆವ ಹರಿಸಿ ಭರದಿಂ ಕೊಡು ಜ್ಞಾನ ಸ್ಥಿರಮತಿಯ ಮುನ್ನ ನಿರುತದ್ಹೊಗಳುವೆ ನಿಮ್ಮ ಚರಿತವನು 3
--------------
ರಾಮದಾಸರು