ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ
ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಪ ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ1 ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ 2 ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ 3
--------------
ಕನಕದಾಸ
ಷಟ್ಪದಿ ಕೂಟವಾಳುವ ಶ್ರೇಷ್ಠ ಶಾರದೆ | ಕೈಟ ಭಾರಿಯ ಭಕ್ತಿ ವೃಕ್ಷವ| ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1 ಪೋಲ್ವ ಮೂಢನ | ಭಾರ ನಿನ್ನದೆ ದೀನ ವತ್ಸಲೆ ಯೆ| ಶುಭಮರ್ಮ ಕಳಿಸುತ | ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ 2 ವೇಣಿ ವೀಣೆಯ | ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ | ಶೂನ್ಯ ಮೂರು ರೂಪಳೆ | ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3 ರಮ್ಯರೂಪಗಳಿಂದ ನಾ ನಾ | ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ | ನುಡಿಸಿ ಕರಿಸುವಿ | ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4 ಮಾಯ್ಗಳ ಗೆಲ್ವ ಬಗೆ ತೋರು | ಮಾತೆ ಯೆನಿಸಿಹೆ ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5 ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು| ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ | ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ | ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6 ವಿನೋದ ಗೊಷ್ಠಿಯ | ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ | ಮಾಧವನು ಸಿಗನಮ್ಮ | ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7 ನೀರಜ ರುದ್ರರ ಬಿಂಬೆ ಭಕ್ತರ | ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ | ಸಾರ ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8 ಭೃತ್ಯ ನಿತ್ಯ ಭಕ್ತಳೆ | ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು | ಸಪ್ತ ಶಿವಗಳ ಮರ್ಮ ಬೇಗನೆ ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ 9 ಸುಖಗಳನುಂಬೆ ಭುಜಿವಿದಿ| ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು | ಶಾಪವ ಶ್ಯಾಮಲಾಶಚಿ | ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10 ನಿಂತು ಶಶಿಯಿಲ್| ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ | ಪತಿ ನಿನಗಹುದಮ್ಮ ಕೊರತೆಯು | ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11 ಕವಚ ತೊಡಿಸುತ | ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12 ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ | ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ | ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13 ಸೇರಿ ತಾಂಡವ ಮಾಡಿ ಪಾದ ಪಂಕಜವ ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ | ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
--------------
ಕೃಷ್ಣವಿಠಲದಾಸರು