ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ ಮಾಡುದಯ ನಿನ್ನವರ ಒಡನಾಡ ಹರಿಯೆ ಪ ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು 1 ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು 2 ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು ನರರೊಳಗೆ ಆಡಿಸುವ್ಯೋ ಮರೆಸು ಅನೃತವ 3 ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ ಹರಿಶರಣರಹುದೆನುವ ವರ್ತನವ ನೀಡು 4 ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ ಪರರಿಗೆರಗಿಸದಿರು ಶರಣಾಗತಪ್ರೇಮಿ ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ ವರದ ಶ್ರೀರಾಮ ನಿಮ್ಮ ಚರಣದಾಸೆನಿಸು 5
--------------
ರಾಮದಾಸರು
ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ಪ ಜಗದಭಿಮಾನ ಬಿಡಿಸಿ ಸುಗುಣ ಸಂತಸಂಗ ಪಾಲಿಸಿ ಸುಗುಣಾಂತರಂಗ ನಿನ್ನ ಸಗುಣ ಪೊಗಳಿಸೆನ್ನ ಮುಖದಿ 1 ಮದಮತ್ಸರಗಳನು ಬಿಡಿಸಿ ಸದಮಲ ಜ್ಞಾನಾನಂದದಿರಿಸಿ ಸದಮಲಾತ್ಮ ನಿಮ್ಮ ಮೂರ್ತಿ ಸದಾಯೆನ್ನ ನೇತ್ರದೊಳ್ನಿಲಿಸು 2 ಕಾಮಿತಂಗಳ ಕಡೆಹಾಯ್ಸಿ ಭೂಮಿ ಸೀಮೆ ಮೋಹ ತೊರೆಸಿ ಸ್ವಾಮಿ ಮಮಪ್ರಾಣದಾರ್ಯ ಶ್ರೀ ರಾಮದಾಸನೆನಿಸು ಒಲಿದು 3
--------------
ರಾಮದಾಸರು