ಶ್ರೀ ಅಷ್ಟಾಕ್ಷರ ವಾಮನಮಂತ್ರ
ಅಮಲ ಗುಣಪರಿಪೂರ್ಣ ಅಮೃತಸಖ ಚಿನ್ಮಯನೆ
ವಾಮನ ಸುಮಂಗಳನೆ ನಮೋ ನಮೋ ನಮಸ್ತೆ ಪ
ಅಮಿತ ಸುಂದರರೂಪ ಕಮಲಾದಿ ಸ್ತ್ರೀಯರಿಗು
ಬ್ರಹ್ಮಾದಿ ಭಕ್ತರಿಗು ಸ್ವಾಮಿ ಸರ್ವಾಶ್ರಯನೆ ಅ ಪ
ಸರ್ವದಾ ಸರ್ವತ್ರ ಸರ್ವ ಸ್ವಾಮಿಯು ನೀನು
ಕೇವಲ ಸುನಿಷ್ಕಳನು ಸರ್ವ ಉತ್ಕøಷ್ಟ
ಸರ್ವ ವೇದಾದಿಗಳಿಂ ಸರ್ವಜ್ಞ ನೀ ಜÉ್ಞೀಯ
ಸರ್ವವಂದ್ಯನೆ ನಮೋ ಪ್ರಣವ ಪ್ರತಿಪಾದ್ಯ 1
ಉದಿತಭಾಸ್ಕರನಿಭ ಸ್ವಕಾಂತಿಯಲಿ ಜ್ವಲಿಸುವೆ
ಸುದರ್ಶನವು ಶಂಖವು ಗದಾ ಜ್ಞಾನಮುದ್ರೆ
ಪದುಮೆ ಸಹ ಸರ್ವ ಜಗದಂತರ್ಬಹಿವ್ರ್ಯಾಪ್ತ
ಅಜ ಮಂತವ್ಯ ವಿಷ್ಣು 2
ಔದಾರ್ಯದಲಿ ಬಲಿಯ ಬೇಡಿ ಇಳಿಸಿ ಉಳಿಸಿ
ಪಾದದಿಂದಲಿ ವಿಯದ್ಗಂಗೆಯನು ಪಡೆದೆ
ಒದಗಿಸಿದೆ ಇಂದ್ರನಿಗೆ ಸ್ವರ್ಗಾಧಿಪತ್ಯವನು
ಪದುಮಜನ ಪಿತ ನಮೋ ಪ್ರಸನ್ನ ಶ್ರೀನಿವಾಸ 3