ಈಡಾಡಿದ್ಯಾ ಪಾಪಂಗಳ ಆಹಾ ಪ
ಮನಸಿಲಿ ನೋಡಿದ್ಯಾ ಯತಿಗಳನ್ನ
ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ಅ.ಪ.
ಹೊದ್ದ ಕಾವಿಶಾಠಿಯಲ್ಲಿ ಶ್ರೀ
ಮುದ್ರೆ ಹಚ್ಚಿದ ದೇಹಕಾಂತಿಯು ಆಹಾ
ತಿದ್ದಿದ ಅಂಗಾರದ ನಡುವೆ ಅಕ್ಷತೆಯು
ಎದ್ದು ಬರುವಂಥ ಈ ಮುದ್ದು ಗುರುಗಳಾ 1
ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ-
ದಂಥ ವರಗಳ ಕೊಡುವ ಜಾಣಾ ಆಹಾ
ಜಗದಂತರದೊಳಗೆ ಪ್ರವೀಣಾ ಸೀತಾ-
ಕಾಂತರೊಳಗೆ ಅತಿಪ್ರಾಣಾ2
ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ
ನಮ್ಮಲಿದ್ದ ಪಾಪಗಳೆಲ್ಲ ಓಟಾ ಅಲ್ಲಿ ವಿದ್ವಾಂಸರ ಜಗ್ಯಾಟ ಆಹಾ
ಮುದ್ದುವಾಹನನೆ ನೀನು ನರಸಿಂಹವಿಠ್ಠಲ ದೂತ
ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ 3