ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ಪ.
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವಅ.ಪ.
ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತÀಳಾದ ಯಮುನೆಯದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ 1
ಸೂತ್ರ ಪುರಾಣ ರಚಿಸಿವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ 2
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ3