ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ
ಪನ್ನಂಗಶಯನ ಕಾಯೋ ಪ
ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ
ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ
ಸನುಮತಿವಿನಿತಿಲ್ಲದೆ ಮನಸಿನೊಳು
ಘನತರ ಭ್ರಮಿಪೆ ಬರಿದೇ
ಶುನಕನ ಕನಸಿದು ಅನಿತ್ಯ ಜಗತ್ಸುಖ
ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ 1
ಘಳಿಗೆಸಂತಸವಿಲ್ಲದೆ ಬಳಲುವೆ ಬಲು
ಇಳೆ ಸುಖದಿ ಮನ ನಿಲ್ಲಿಸಿ
ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ
ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ 2
ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್
ವ್ಯರ್ಥ ಬಳಲಿಪರೆ ಎನ್ನ
ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್
ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ 3