ನಿನ್ನ ವಲಿಸುವ ಭಾಗ್ಯ ನಿನ್ನ ಭಕ್ತರಿಗೆ ನೀ ಕೊಟ್ಟು
ಸನ್ನುತ ಚರಿತರಿಗೀವೆಯಲ್ಲದೆ
ನಿನ್ನ ಮಹಿಮೆಯ ತೋರುವ ಅನ್ಯರಿಗೆ ಈ ಭಾಗ್ಯವುಂಟೆ
ನಿನ್ನ ವಲಿಸಲು ಸಂಪನ್ನ ಶ್ರೀ ಶ್ರೀನಿವಾಸ 1
ಸೂರ್ಯ ತೇಜಕೆ ಪ್ರತಿ ಕೋಟಿಸೂರ್ಯ ತೇಜ ಧರಿಸಿ
ಆರ್ಯ ರಾಮರಾಯರಾ ಕರಗತದಿ ಮೆರೆದೊ ಜಗತ್ಸಿರಿಯೆ ಆ
ಆರ್ಯರಾ ಮಡದಿ ಸೀತಾಬಾಯಿ ಎಂಬುವರಾ ಆ
ಈರ್ವರಾ ಸೇವೆಯಲಿ ಮೆರೆದ ಸುರತರುವೆ ಶ್ರೀ ಶ್ರೀನಿವಾಸ 2
ನಿನ್ನ ಸೇವಾಕಾರ್ಯ ಆವಾವುದೆಂದ್ಯೋಚಿಸದೆ
ನಿನ್ನ ಸೇವಾಕಾರ್ಯದಲಿ ನಿರುತ ತಪವನೆಗೈಯೆ
ಮಾನವ ವೇಷಧಾರಿಣಿಯರಾಗಿ ಪುಟ್ಟಿಹರೂ ಜಗದಿ
ಬಕುಳಾವತಿಯ ತೆರದಿ ನಿನ ಸೇವ ನಿರತದಿ ಶ್ರೀ ಶ್ರೀನಿವಾಸ 3
ಸಾರ ಗುರುಮುಖದಿಂದ ತಿಳಿದು ನಿ
ಲಕುಮಿ ಆವಾಹಿಸಿದ ಬಿಲ್ವರÀಸವ ನಿನಗರ್ಪಿಸಿ
ಅಕಳಂಕ ಮಹಿಮರು ಸೇವಿಸಿ ಸೌಳ ವರುಷ
ತಪವಗೈದಿಹರೊ ಗುರುವಾಜ್ಞೆಯಲಿ ನಿನ್ನ ಸೇವಿಸೆ ಶ್ರೀ ಶ್ರೀನಿವಾಸ 4
ನಿನ್ನ ಸೇವಕರಾದ ಆ ಮಾನುನಿಯರನುದ್ಧರಿಶೆ
ನಿನ್ನ ಇಂಥ ಆಟಗಳ ಗೋಪಿಗೆ ಕೃಷ್ಣ ತೋರಿದಂದದಲಿ
ಸನ್ನುತಾಂಗನೆ ತೋರಿ ಭಕ್ತರಭೀಷ್ಟವನು
ಉನ್ನತದಿ ಸಲಿಸೆ ಜಗದಿ ಘನ್ನ ಸಂಪನ್ನ
ಲೀಲೆನೋಡಲು ಶ್ರೀ ಶ್ರೀನಿವಾಸ 5
ಗಂಗಾಜನಕನೆ ನಿನ್ನುಂಗುಟದಿಂ ಬಂದ ಗಂಗೆಯ
ಕೇಸರಿತೀರ್ಥದಾ ಸೊಬಗೇನೆಂದು ಬಣ್ಣಿಪೆನೊ
ಶ್ರೀ ರಂಗನಾಥಾ ಸರ್ವರಿಗೆ ದಾತಾ ರಂಗನಾಥನೇ ನಿನ್ನ
ಪಂಚಾಮೃತದ ಅಭಿಷೇಕ ಕಂಗಳಿಗ್ಹಬ್ಬವೊ
ಜಗದ ಜಂಗುಳಿ ಭಕ್ತರಿಗೆನುತೆ ಶ್ರೀ ಶ್ರೀನಿವಾಸಾ 6
ತನ್ನ ತೊಡೆಯೊಳಗಿಟ್ಟು ಉನ್ನತದ ಆಭರಣ
ಗೋಪಿ ಇಡುವ ತೆರದಿ
ಇನ್ನು ನಿನಗಲಂಕಾರ ಮಾಡುವದೇನ ಬಣ್ಣಿಪೆನೋ
ಸನ್ನುತ ಚರಿತರವರೈಸೇ ನಿನ್ನ ನೇವೇದ್ಯ
ಘನ್ನ ಮಂಗಳಾರುತಿ ಬೆಳಗಿ ನಿನ್ನ ಸ್ತುತಿ ಮಾಡುತ್ತ
ನಿನ್ನ ತೀರ್ಥವನ್ಹಂಚುವರೊ ಭಕ್ತರಿಗೆಲ್ಲ ಶ್ರೀ ಶ್ರೀನಿವಾಸ 7
ಏನು ಸುಕೃತವ ಮಾಡಿ ಈ ಮಾನುನೀಯರು ಪುಟ್ಟಿಹರೊ
ಗಾನಲೋಲನೆ ನಿನ್ನ ಲೀಲೆ ಜಗಕೆ ಬೇರೆ ತೋರೆ ಮನಸಾರೆ
ಸಾನುರಾಗದಿ ಬಂದು ನಿನ್ನ ಭಕ್ತರಾ ಮಂದಿರಕೆ
ದೀನನಾಥನೆ ನಿನ್ನ ಸಹಿತದಲಿ ಮಾನುನಿಯು
ದಾನವಾಂತಕ ನಿನ್ನ ಮಹಿಮೆ ತೋರುವರೊ
ಏನೆಂದು ಬಣ್ಣಿಸಲಿ ಎನ್ನಳವೇ ಶ್ರೀ ಶ್ರೀನಿವಾಸ 8
ಒಬ್ಬೊಬ್ಬ ಭಕ್ತರಲಿ ಒಂದೊಂದು ಮಹಿಮೆಯನು
ಅಬ್ಬರದಿ ತೋರುವರೊ ನಿನ್ನ ಮಹಿಮೆಯ ದೇವ
ಮತ್ತೊಬ್ಬರಾ ಮನೆಯಲ್ಲಿ ಪ್ರಸಾದದಾ ಮಹಿಮೆಯನು
ಮತ್ತೊಬ್ಬರಾ ಮನೆಯಲಿ ತೀರ್ಥದಾ ಮಹಿಮೆ ತೋರಿ
ಅಬ್ಬರದಿ ಮೆರೆಸುವರೋ ಶ್ರೀ ಶ್ರೀನಿವಾಸ 9
ಗಾನ ಪ್ರಿಯನೆ ನಿನ್ನ ಕಲ್ಯಾಣದುತ್ಸವವು
ಏನೇನು ಮಾಡುವ ಕಾರ್ಯ ನಿನ್ನದೇ ಎಂದು
ಆನಂದದಿಂದ ಮಾಡುವರೊ ಹರಿಯೆ ದೋರೆಯೆ
ದೀನನಾಥ ಎನ್ನ ಹೃದಯದಲಿ ನೀನಿಂತು ನುಡಿದಂತೆ
ನುಡಿದಿರುವೆ ಅನಾಥ ಬಂಧು ಶ್ರೀ ಶ್ರೀನಿವಾಸಾ ಶ್ರೀಶಾ 10