ಮಾಧವ ಮಧುಸೂದನ ಗೋವರ್ಧನ ಪ
ದೋಷನಿವಾರಣ ಶೇಷಾರಿಗಮನ
ವಾಸುಕಿಗಿರಿಶಯನ 1
ಕೀಟಕ ಸಂಹರ ಹಾಟಕಾಂಬರ
ತಾಟಕಿಪ್ರಾಣಹರಣ 2
ಕೌಸ್ತುಭಮಾಲಾ ಕುಜನರ ಕಾಲ
ಕಂಸಾಸುರಾದಿ ಮರ್ದನ 3
ಗೋಕುಲವಾಳಿದ ಗೋಪಿಯರ್ವರದ
ಗೊಪ ಗೋಪತಿ ನಂದನ 4
ಮಂದರ ನಿಲಯ ಸಿಂಧುಜಾಪ್ರಿಯ
ಬಂಧುವೆ ಅನಾಥಜನ 5
ಜಗದೋದ್ಧಾರಣ ಜಗತ್ರಯಮೋಹನ
ಜಗಜೀವನ ಪಾವನ 6
ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ
ಶಂಖಸುರಾದಿ ಮರ್ದನ 7
ಯದುಕುಲಸಂಭವ ಸದಯ ಯಾದವ
ಸದಮಲಸುಖಸದನ 8
ಹರಿಗೋವಿಂದ ಪರಮಾನಂದ
ನರಹರಿ ಸಿರಿರಮಣ 9
ಸಿರಿನರಸಿಂಗ ಪರಿಭವಭಂಗ
ಪರತರ ಗಿರಿಧಾರಣ 10
ನಿತ್ಯನಿರಾಮಯ ನಿರ್ಗುಣ ನಿರ್ಭಯ
ನಿರಂಜನ 11
ಪರಮಪುರುಷ ಹರಿ ಸರ್ವೇಶ
ಸುರಮುನಿನುತಚರಣ 12
ನಿಮಗೋಚರ ಜಗದಾಧಾರ
ಅಘನಾಶ ಭಜಕಜನ 13
ವೇದಾದಿನಮಿತ ವೇದವೇದಾತೀತ
ಸಾಧುಸಜ್ಜನಪ್ರಾಣ 14
ವರದಶ್ರೀರಾಮ ನಿರತರ ಪ್ರೇಮ
ಪರಿತರ ಪರಿಪೂರ್ಣ15