ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ
ಭವ ನಷ್ಟವಗೈಸೋದು
ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ
ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ
ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ
ಯಾಸ ಬಡುತಲಿದ್ದೆ ಲೇಶವಾದರು ಸುಖ
ಲೇಶಗಾಣದಿರಲು ಏಸು ಜನ್ಮದ ಪುಣ್ಯ
ಸೂಸಿತೋ ನಿನ್ನಯ ದರುಶನ ಲಾಭವಾಗೆ
ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ
ಈ ಸುಲಭ ವೊಂದಿಸನುದಿನ ದು
ರಾಶೆಯ ಬಿಡಿಸೆಂದು
ನಾಶರಹಿತ ಗುಣರಾಶಿ ರಮೇಶ 1
ವೇದಪರಾಯಣ ಸಾಧುಗಳರಸಾ ವಿ
ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ
ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು
ನಾದ ಸನಕಾದಿ ಮುನಿವಂದಿತಾ
ಮಾಧವ ಮಹಿಧರ ಯಾದವ ಕರುಣ ಪ
ಯೋಧದಿ ಎನ್ನಪರಾಧವನೆಣಿಸದೆ
ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು
ಭೂದೇವರೊಡಿಯಾ 2
ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು
ಕರದ ಮಾತಿಗೆ ಭಯಂಕರವ ಓಡಿಸಿ ಮಂದ
ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ
ನಿತ್ಯ ಕರ ಪತಿ ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ
ತೋರಿಸೊ ಭಜಕರರೊಳಗಿಡುವುದು 3