ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ |
ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಪ
ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು |
ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ |
ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ |
ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ1
ವೀಣಾರೋಚನಾ ವಿಜ್ಞಾನಾಭಿಮಾನಿ ನಿ |
ದಾನ ತ್ರಿಜಗದ್ಗುರುವೆ ಸುರತರುವೇ |
ಕರವ ಮುಗಿದು ಕರವೇ |
ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ |
ಜನನವ ಬಿಡಿಸೋದು ಗಾನವ ನುಡಿಸೋದು 2
ಭಾಷಿಸುವ ಮಾತಂಗ ಪರ್ವತದಲಿ ತುಂಗಾ |
ವಾಸವ ವಿನುತ ಸತ್ವಕಾಯಾ |
ನಿತ್ಯ ಜಪಿತಾ |
ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ |ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ 3