ಅಧ್ಯಾಯ ಮೂರು
ಪೂತನಾ ಅಸುಹಾರಿಣಿ ನಮಃ
ಪದ್ಯ
ಪೊಡವಿಯಲಿ ಎಲ್ಲರಿಗೆ ಒಡಿಯನಾಗಿರುವಂಥ
ಖಡು ಪಾಪಿ ಕಂಸಗೆ ಬಿಡದೆ ಪ್ರತಿವರ್ಷಕ್ಕೆ ಕೊಡತಕ್ಕ
ಕಪ್ಪವನು ಕುಡಬೇಕು ಎಂತ್ಯೆಂದು ನಡದು ತಾ
ಮಥುರೆಯಲಿ ಖಡುನಂದಗೋಪಾ| ಒಡಿಯನಪ್ಪಣಿಯಿಂದ
ಗಡಬಡಿಸೆ ಪೂತನಿಯು ಹುಡುಗರನ್ನು ಹುಡುಕುತಲೆ
ಬಡಿವಾರ ತೋರುತಲೆ ನÀಡದು ಬಂದುಳು ಹಾದಿ ಹಿಡಿದು ಗೋಕುಳಕೆ|| 1
ಧಡಿಯ ದಿವ್ಯಾಂಬರವು ಶಡಗರದಿ ಉಟ್ಟಿಹಳು
ಕಿಡಿಯಂಥ ಕುಪ್ಪುಸವು ದೃಢ ಬಿಗಿದು ತೊಟ್ಟಿಹಳು|
ಬಿಡÀದೆ ಸರ್ವಾಭರಣ ಜಡದಿಹಳು ತಾ ಮಿಂಚು
ಹೊಡದಂತೆ ತೋರುವಳು ಉಡುರಾಜ ಮುಖಿಯು|
ಎಡಬಾರಿ ದುರಬಿನಲಿ ದೃಢವಾಗಿ ಮಲ್ಲಿಗಿಯು
ಮುಡಿದಿಹಳು ಉರದಲ್ಲಿ ದೃಢವಾದ ಕುಚವೆರಡು
ನಡವುದಾ ಕಾಲಕ್ಕೆ ನಡಗುತಿಹವು 2
ಬಿಂಬೋಷ್ಟಿ ಮಾಯ ಅವಲಂಬಿಸುತ ಗೋಕುಲದ
ತುಂಬ ಬೆಳಕವು ಮಾಡಿ ಜಂಭದಲಿ ಬರುತಿಹಳು
ಗಂಭೀರಳಾಗಿ ತನಗುಂಭ ತಿಳಿಗುಡದೆ ಕುಚ
ಕುಂಭಗಳವಳಗ ವಿಷ ತುಂಬಿಟ್ಟು ಕೊಂಡು
ಅಂಬುಜಾಕ್ಷಿಯ ಕಂಡು ಸಂಭ್ರಮದಿ ಗೋಕುಲದ
ಜಗದಂಬಿಯೊ ಎಂದೂ 3
ಮುಂದ ಆ ಪೂತನಿಯು ನಂದಗೋಪನ ಮನಿಗೆ
ಬಂದು ದೇವೇಚ್ಛಿಯಲಿ ನಂದನಂದನನ ಕಣ್ಣಿಂದ ನೋಡಿದಳಾಗ
ಛಂದದ್ಹಾಸಿಕೆಯಲಿ ಛಂದಾದ ಲೌಕೀಕದ ಕಂದನಂತೆ|
ಮುಂದವನ ತೊಡಿಯ ಮ್ಯಾಲೆ ಛಂದಾಗಿ ಧರಿಸಿದಳು
ಕಂದರ್ಪನೈಯನೆ ಕಂದನಾಗಿರುವನೆಂತ್ಯೆಂದು ತಿಳಿಯದೆ ನಿದ್ರಿ
ಯಿಂದಿರುವ ಸರ್ಪ ಕರದಿಂದ್ಹಿಡಪರಿ ರಜ್ಜು ಎಂದುಬ್ಯಾಗೆ 4
ಶ್ರೀನಿವಾಸನ ಜನನಿ ಮೌನ ಹಿಡಿದಳು ಕಪಟತನ ತಿಳಿಯದೆ
ಬುದ್ಧಿಹೀನ ಪೂತನಿಯು ಸ್ತನಪಾನ ಮಾಡಿಸಿದಳಾ
ದಾನವಾರಿಗೆ ಅವನು ಪ್ರಾಣಸಹಿತಾಗಿ ವಿಷಪಾನ ಮಾಡಿದನು|
ದ್ರೂಣನಾಗಿರುವವನ ಪಾಣಿಯಲಿ ಸಿಕ್ಕು ಗತಿಗಾಣದಲೆ
ಉತ್ಕøಷ್ಟ ವಾಣಿಯಿಂದಲೆ ಒದರಿ ಭ್ರೂಣಹನನಕ ಬಹಳ ಜಾಣಿ
ಎಂತ್ಯೆನಿಸುವಳು ಪ್ರಾಣ್ಹೋಗಿಬಿದ್ದಳಾ ಪ್ರಾಣಿ ಪೂತನಿಯು.
ಪದ:ರಾಗ :ಶಂಕರಾಭರಣ ಅಟತಾಳ, ಸ್ವರಷಡ್ಜ
ಬಿದ್ದಾಳು ಪ್ರಾಣ ಹೋಗಿ ಪೂತನಿ ಜನ್ಮಗೆದ್ದಾಳು ಬಾಲಕ ಘಾತಿನಿ|
ಬಂತುದೆವಾಯಿತು ಮತ್ತಲ್ಲೆ|| 1
ಗಿರಿಯಂತೆ ಆ ದೇಹ ಇರುವೋದು ಆರು ಹರದಾರಿ
ಪರಿಯಂತೆ ಬಿದ್ದಿಹದು| ಕರಚರಣಗಳ್ಹರವಿ ಇರವದು ಅಲ್ಲಿ
ಇರವೂ ವೃಕ್ಷಗಳೆಲ್ಲಾ ಮುರದಿಹದು|| 2
ಎರಡು ಕಣ್ಣುಗಳು|
ದಾಡುವರಲ್ಲೆ ನದಿಗಳು|| 3
ಭಾವಿಯಪರಿ ತೋರುವುದು
ಹೇಳುವದಿನ್ನು ಉಳದಿಹುದು
ದಾನವಾರಿಯಕೊಂಡು ಕರದಿಂದ ವಿಷಪಾನ ಮಾಡಿಸಿದ
ಕಾರಣಿದಿಂದ | ಹಾನಿತನಗೆ ಬಂತು ತ್ವರದಿಂದ|
ಅಚುತಾನಂತಾದ್ರೀಶ ಕರದಿಂದ|5
ಪದ್ಯ
ಬಾಲಕಾಕಿಯ ಎದಿಯಮ್ಯಾಲೆ ನಿರ್ಭಯದಿಂದ
ಲೀತಿಯನ ಮಾಡುತಿಹ ಬಾಲಿಯರು ಬ್ಯಾಗ ಆ
ಬಾಲಕನ ಕರಕೊಂಡು ಮ್ಯಾಲೆ ಗೋಮೂತ್ರದಲಿ
ಬಾಲಗ್ಯರದರು ಅವರು ಭಾಳ ಸಂಭ್ರಮದಿ|
ಕಾಲ ಆ ಕಾಲಕಿಟ್ಟರು ನಂದ ಬಾಲಕರನೆನಿಸುವ ಜಗತ್ಪಾಲಕಗ ರಕ್ಷಾ|| 1
ಬಾಲ ನಿನ್ನನ್ನು ಜಗತ್ಪಾಲಕನು ರಕ್ಷಿಸಲಿ| ಪದಾಗಳು ಆ ಮೂರು
ಪಾದದವ ರಕ್ಷಿಸುತಾ ಜಂಘವನು ಮತ್ತ ಶ್ರೀರಂಗ ತಾ
ರಕ್ಷಿಸಲಿ ಜಾನುವನು ರಕ್ಷಿಸಿ ಜಾನ್ಹವಿಜನಕಾ | ಉರುಗಳಾ
ರಕ್ಷಿಸಲಿ ಉರ್ವೀಶ ಹರಿತಾನು ನಾಭಿಯನು ಶ್ರೀಪದ್ಮನಾಭ
ಸಂರಕ್ಷಿಸಲಿ ಹೃದಯಗತ ಶ್ರೀ ಹರಿಯು ಭುಜಗಳನು
ರಕ್ಷಿಸಲಿ ಭುಜಗಶಯನಾ||2
ಕಂಠವನು ಮತ್ತ ವೈಕುಂಠಪತಿ ರಕ್ಷಿಸಲಿ
ಮುಬವನ್ನು ರಕ್ಷಿಸಲಿ ಮುಕುಟವರ್ಧನ ಹರಿಯು|
ಶಿರವನ್ನು ರಕ್ಷಿಸಲಿ ಶಿರಿಯರಮಣನನು ತಾನು
ಅಂಗಜನ ಜನಕ ಸರ್ವಾಂಗ ರಕ್ಷಿಸಲಿ|
ಜಲಜಾಕ್ಷಿಯರು ಹೀಂಗ ಹಲವು ದೇವತಿಗಳನ
ಬಲಗೊಂಡು ಮತ್ತವರ ಬಲದಿ ರಕ್ಷೆಯ ನೀಡಲು|
ಜಲಜಮುಖಿ ಜನನಿ ತನ್ನ ಚಲುವ ಬಾಲಕಗ ತಾ
ಮೊಲಿಕೊಟ್ಟು ಮಂಚದಲಿ ಮಲಗಿಸಿದಳವನಾ|
ಖಳಕಂಸಗಾ ಕಪ್ಪುಗಳ ಕೊಟ್ಟು ನಂದ ತಾ ಇಳದ
ಮನಿಯಲಿ ಇರಲು ತಿಳದು ಆ ಸುದ್ದಿ ತನ್ನ
ಸ್ಥಳವನ್ನು ಬಿಟ್ಟು ಆ ಸ್ಥಳಕ ಬಂದನು ಪರಮ
ಗೆಳೆಯ ವಸುದೇವ ಮನದೊಳಗ ಹಿಗ್ಗುತಲೆ|| 3
ಆರ್ಯಾ
ಜಾಣನು ಆತನ ಕಾಣುತಲ್ಯದ್ದನು
ಪ್ರಾಣಬರಲು ದೇಹದ ಪರಿಯು| ಪ್ರಣಾಮಮಾಡಿ
ಆ ಪ್ರಾಣಯನಪ್ಪಿದ ಪಾಣಿಹಿಡಿದು ಗೋಕುಲ ಧೊರಿಯು|| 1
ಆಮ್ಯಾಲಿಬ್ಬರು ಪ್ರೇಮದಿ ಕುಳಿತರು ಕ್ಷೇಮವಿಚಾರ
ಮಾಡುತಲೆ| ಆಮ್ಯಾಲ ಶೌರಿಯು ಕೋಮಲ ಹೃದಯದಿ
ತಾ ಮಾತಾಡಿದ ಪ್ರೇಮದಲೆ|| 2
ಪದ:ರಾಗ:ಶಂಕರಾಭರಣ ತಾಳ:ಭಿಲಂದಿ ಸ್ವರ:ಪಂಚಮ
ಸಕಲ ಜನರು ನಂದಗೋಪ ಸುಖದಲಿರುವರೆ
ಸಖನೆ ನಿನ್ನ ಮನಿಗೆ ಭಾವುಕರು ಬರುವರೆ|| ಪ
ದೃಷ್ಟ ವಿಷಯನಾದಿ ನೀ ಅದೃಷ್ಟಯೋಗದಿ|
ವೃಷ್ಟಿ ಮಾಡಿದಿ|| 1
ನಿನಗ ಪುತ್ರನಾದ ಸುದ್ದಿ ಎನಗ ಮುಟ್ಟಿತು |
ನನಗೆ ಕಡೆಯ ಪುತ್ರನವನೆ ನಿನಗೆ ಒಪ್ಪಿತು|| 2
ಸಕಲರಿಂದ ಕೂಡಿ ಅವನು ಸುಖದಲಿರುವನೆ
ಸಕಲ ಜನರಿಗ್ಯವನು ಪ್ರಾಣಸಖನು ಆದನೆ|| 3
ಅಲ್ಯೆ ಗೋಗಳೆಲ್ಲ ರೋಗ ಇಲ್ಲದಿರುವವೆ|
ಹುಲ್ಲು ನೀರಿನಿಂದ ಸೌಖ್ಯದಲ್ಲಿ ಇರುವವೆ|| 4
ಚನ್ನಿ ಗಾನಂತಾದ್ರೀಶನ್ನ ನೆನುವರೆ 5
ಆರ್ಯಾ
ಛಂದಾಗ್ಯವ ಹೀಗೆಂದ ಮಾತು ಆನಂದಗೋಪ
ತಾ ಕೇಳುತಲೆ| ಮುಂದಾ ಶೌರಿಯಮುಂದ ನುಡದನು
ಮಂದಹಾಸ್ಯದಲಿ ನಗುವುತಲೆ|| 1
ಪದ, ರಾಗ :ಮುಖರಿ ತಾಳ :ಆದಿ
ದುಃಖವು ಸುಖಕಾರಿಯೆ ಪ
ಎನಗೆ ತಿಳಿನೀನು|| 1
ಹಿಂದಿನ ದುಃಖ ಹಿಂದೆ ಹೋಯಿತು | ತಿಳಿ
ಮುಂದ ನಿನಗೆ ಸೌಖ್ಯವಾದೀತು|| 2
ಚಿಂತಿಮಾಡಲಿ ಬ್ಯಾಡಾ ವಸುದೇವಾ|
ಚಲುವಾನಂತಾದ್ರೀಶನೆ ದಯ ಮಾಡಿರುವಾ|| 3
ಆರ್ಯಾ
ನಂದ ಗೋಪನಾನಂದ ವಚನಗಳ ಛಂದದಿ ಕೇಳುತ
ವಸುದೇವಾ | ಮುಂದ ನುಡದ ಹೀಗಂದು ಮತ್ತ ತ್ವರದಿಂದ
ತನ್ನ ಹೃದ್ಗತ ಭಾವಾ || 1
ಪದ ರಾಗ:ಸಾರಂಗ ಆದಿತಾಳ ಸ್ವರ:ಷಡ್ಜ
ಭಿಡಯಾ ಬಿಟ್ಟ ಹೇಳುವೆ ಎನ್ನ ನುಡಿಯು ಲಾಲಿಸಿ|| ಪ
ಉತ್ತಮ ಕೇಳಿನ್ನಾಮಗನಾ ಉತ್ಪತ್ತಿ ಕಿವಿಯಿಂದ ಕೇಳಿ|
ಉತ್ಪನ್ನವಾದಾವು ಬಹಳ ಉತ್ಪಾತಗಳು|| 1
ಕಂಸನ ಅಂಜಿಕೆಯಿಂದ ಸಂಶಯ ಬಿಡುವÀಲ್ಲದಿನ್ನು|
ಸಂಸಾರದೋಳ್ಸುಖವು ಸ್ವಲ್ಪಾ ಸಂಶಯವೆ ಭಾಳಾ||2
ಮುಟ್ಟಿತು ಕಂಸಗ ಕಪ್ಪ ಭೆಟ್ಟಿ ಆಯಿತು ನಿಮ್ಮನು|
ಘಡ್ಯಾಗಿ ಅನಂತಾದ್ರೀಶನ ಮುಡ್ಡಿ ಭಜಿಸುತ|| 3
ಪದ್ಯ
ಯಾದವನ ಮಾತಿಗ್ಯನು ಮೋದವನು ಬಟ್ಟು
ನಂದಾದಿಗಳು ಗೋಕುಲದ ಹಾದಿಯನು ಹಿಡಿದು
ಪರಮಾದರದಿ ನಡದರು. ಅಗಾಧವಾಗಿಹ ದೇಹ
ಹಾದಿಯಲಿ ಬಿದ್ದಿಹುದು ಹಾದಿಯನು ಕಟ್ಟಿ|
ಆ ದೇಹ ನೋಡುತ ಅಗಾಧ ಬಟ್ಟವರು ಅಲ್ಯಾದದ್ದು
ಮನದಲ್ಲಿ ಶೋಧಿಸ್ಯಂದರು ಹೀಗೆ | ಸಾಧು ವಸುದೇವ
ಹುಸಿ ಆದದ್ದು ಉಂಟೇ| 1
ಪರಿ ಅವರು ಕೊಡಲಿಯನು ಕೊಂಡು
ಕಡಕಡದು ಈ ದೇಹವನು ಸುಡಲು ದೂರದಲಿಟ್ಟು
ಕಡೆ ಬಿಡದೆ ಆಕಾಶಕ್ಕೆ ಅಡರಿತಾಗೆ| ಖಡುಪಾಪಿ ಪೂತನಿಯು
ಕುಡಲು ವಿಷ ಮೊಲಿಯನ್ನು ಕುಡುದು ಸದ್ಗತಿಕೊಟ್ಟ
ತಡವಿಲ್ಲದಲೆ ಹರಿಯು ದೃಢಭಕ್ತಿಯಿಂದಲೆ ಕಡಿಗೆ
ಕ್ಷೀರಾದಿಗಳು ಕೊಡಲು ಸದ್ಗತಿಯನ್ನು ಕುಡವದೇನÀದು|| 2
ಶೌರಿಸಖನಂದ ಪರಿವಾರ ಸಹಿತಾಗಿ ತಾ ಈ ರೀತಿ ಉತ್ಪಾತ
ಮೀರಿ ಮನಿಯಲಿ ಬಂದು ಪೂರ್ವದಲಿ ಆಗಿಹ ಅಪೂರ್ವ
ವೃತಾಂತವನು ಪೂರ ಕೇಳ್ಯಾಶ್ಚರ್ಯ ಪೂರಿತನು ಆಗಿ
ವೈರಿ ಪೂತನಿಯ ಸಂಹಾರಿಯಾ ಕರಕೊಂಡು|
ಚಾರುಮುಖ ನೋಡಿ ಸುಖಪೂರನಾದಾ | ಈ ರೀತಿ
ಚರಿತವನು ಆರು ಕೇಳುವರು ಅವರ ಘೋರ
ದುರ್ಷಟವೆಲ್ಲ ದೂರಾಗಿ ಹೋಗುವದು ಶುಭಚನ್ಹ
ಚಾರ್ವನಂತಾದ್ರೀಶ ಮೂರುತಿಯು ಮುಗಿಸಿದಿದು
ಭಾಗವತ ದಶಮಸ್ಕಂಧ 3
ಪೂತನಾದಧೋ ನಾಮ ತೃತಿಯೋಧ್ಯಾಯಃ|
|| ಶ್ರೀ ಕೃಷ್ಣಾರ್ಪಣಮಸ್ತು||
|| ಮೂರನೆಯ ಅಧ್ಯಾಯವು ಸಂಪೂರ್ಣ||