ದೇವಾದಿದೇವನೇ ನಮೋ ನಮೋ
ಪರವಾಸುದೇವನೇ ನಮೋ ನಮೋ ಪ.
ನಿಗಮೋದ್ಧಾರನೇ ನಮೋ ನಮೋ
ನಗಧರನೇ ನಮೋ ನಮೋ
ಜಗತ್ಪತಿವರಾಹ ನಮೋ ನಮೋ 1
ನೃಪಂಚಮುಖಸ್ವರೂಪ ನಮೋ ನಮೋ
ಕಪಟವಟುವಾಮನ ನಮೋ ನಮೋ
ತಪನಕುಲತಿಲಕ ನಮೋ ನಮೋ 2
ನವನೀತಚೋರ ನಮೋ ನಮೋ
ಭವಬಂಧಮೋಚನ ನಮೋ ನಮೋ
ನವಮೋಹನಾಂಗ ನಮೋ
ವಸುದೇವತನಯ ನಮೋ ನಮೋ 3
ಬುದ್ಧ ಸ್ವರೂಪ ನಮೋ ನಮೋ
ಸಿದ್ಧಸಂಕಲ್ಪ ನಮೋ ನಮೋ
ಚಿದ್ವಿಲಾಸ ನಮೋ ನಮೋ 4
ಸತ್ಯಕಾಮ ವೈಕುಂಠಧಾಮ ನಮೋ ನಮೋ
ನಿತ್ಯತೃಪ್ತ ನಿರ್ಮಲಾತ್ಮ ನಮೋ ನಮೋ
ಸತ್ಯಭಾಮಾರಮಾ ನಮೋ ನಮೋ 5