ಸತ್ಯವರ ಮುನಿಪ ದಿಕ್ಷತಿಗಳಂತೆ
ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ ಪ
ಸಿಂಧೂರವೇರಿ ದೇವೇಂದ್ರನಂತೊಪ್ಪುವನು
ವಂದಿಪ ಜನರಘಾಳಿವನ ಕೃಶಾನು
ಮಂದ ಜನರಿಗೆ ದಂಡ ಧರನಂತೆ ತೋರ್ಪಕ
ರ್ಮಂದಿಪನು ನರವಾಹನವೇರಿ ನಿಋಋತಿಯೆನಿಪ 1
ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ
ಜೈನಾದಿಮತ ಘನಾಳಿಗೆ ಮಾರುತಾ
ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ
ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ 2
ಶ್ರೀಮದ್ರಮಾಪತಿ ಜಗನ್ನಾಥ ವಿಠಲ
ಸ್ವಾಮಿ ಪಾದಾಬ್ಜ ಭಜನಾಸಕ್ತನಿವ
ಧೀಮಂತ ಗುರು ಸಾರ್ವಭೌಮ ಭೂ ಸುರನುತ
ಮಹಾ ಮಹಿಮ ಪೊಗಳಲೆನ್ನೊಶವೇ ಕರುಣಾ ಸಿಂಧು3