ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನ ಬಂಧು ಕರುಣಾಸಿಂಧು ನೀನೆ ಬಂದು ರಕ್ಷಿಸೆಂದು ಪ. ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ ನಿತ್ಯ ಕಾರುಣ್ಯ ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ 1 ಸರಸಿಜಾಸನ ತಾನು ಪರಮ ಭಕುತಿಯಿಂದ ಸಿರಿವರ ನಿನ್ನ ನಾನಾ ಪರಿಯಿಂದಲಿ ಶರದೃತುವಿಲಿ ಬಹುಧರವಾಗಿ ಪೂಜಿಸುವ- ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ 2 ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ- ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ 3
--------------
ತುಪಾಕಿ ವೆಂಕಟರಮಣಾಚಾರ್ಯ