ಜಯ ಜಯ ನಿಮಗೆ ಜಯವಣ್ಣ
ಭಯವಿಲ್ಲೀನುಡಿ ಕೇಳ್ ಚಿಣ್ಣ ಪ
ಶ್ರೀ ಮನೋಹರನ ಲೀಲೆಯಿದು ಸು
ಕ್ಷೇಮವಹುದು ಸತ್ಪುರುಷರಿಗೆ1
ಈ ಜಗತ್ತನೂ ಈಶ್ವರನೂ ತಾ
ರಾಜನಾಗಿ ಕಾಪಾಡುವನು 2
ಕುರುಡರು ತಾವ್ ಕೆಡುವರು ಕೊನೆಗೆ 3
ಇದರೊಳುಂಟು ಬಹುವಿಧ ಭೇದ
ವದರುತಿಪ್ಪದು ಸಕಲವೇದ4
ಅಂತ್ಯವಿಲ್ಲದಿಹ ಕಾರಣದಿ ಅ
ನಂತ್ಯವೆಂದು ಪೇಳ್ವರು ಭರದಿ 5
ಮನುಜ ಜನ್ಮ ಬಹುದುರ್ಲಭವು
ಮನನಶೀಲರಿಗಹುದು ಶುಭವು 6
ಮರೆಯಬೇಡಿ ಜನರೆ ನೀವು
ಅರಿತು ಅರಿಯದವರಿಗೆ ನೋವು 7
ಕತ್ತಲೆ ಕೊನೆಯಿಲ್ಲದ ಘೋರ 8
ವುಳಿಯದು ನಿಮಗದು ಕೇಳ್ ಜನರೆ 6
ಧರ್ಮವೆಂಬ ಮೂಟೆಯ ಕಟ್ಟೆ
ಬಟ್ಟೆ 10
ಗುರುವಾಜ್ಞೆಯ ಮೀರುವುದು ಸಲ್ಲ ಈ
ದುರುಳತನ ನಿಮಗೆ ಸರಿಯಲ್ಲ 11
ನಾನೇ ಶ್ರೇಷ್ಠನೆಂಬುವ ಮಾತು
ಶಾನೆ ವಡಕು ಗಡಿಗೆಯು ತೂತು 12
ಹಿಂದಿನವರ ಕಷ್ಟವ ನೋಡಿ
ಮುಂದಕೆ ಸತ್ ಸಾಧನೆ ಮಾಡಿ 13
ಮೂರು ಕರಣ ಶುದ್ಧಿಯು ಬೇಕು
ಧೀರ ಜನರಿಗಿಷ್ಟೇ ಸಾಕು 14
ಜನರ ನೋಡಿ ನಡೆಯಲಿಬೇಡಿ
ಕೊನೆಗೆ ನಿಮಗೆ ಕಾಲಿಗೆ ಬೇಡಿ 15
ಹೆಚ್ಚಪೇಕ್ಷಿಸೆ ಬರುವುದಿಲ್ಲ
ಮೆಚ್ಚನು ನಿಮಗೆ ಸಿರಿಯನಲ್ಲ 16
ನಿರ್ಮಲ ಮಾರ್ಗ ಹುಡುಕಿದಿರಾ 17
ಜ್ಞಾನರತ್ನ ಸಂಪಾದನೆಯು
ಹೀನ ಜನರಿಗಾಗದು ಕೊನೆಯು 18
ದುರಾಸೆಯಲಿ ಕೆಡುವರು ಕೆಲರು
ನರಾಧಮರು ಎಂದೆನಿಸುವರು 19
ಪರಿಯಂತ ತಂ
ತಮ್ಮಟ್ಟಿಗಿಹುದು ಅಂತ 20
ಗೂಡಿನ ಮೇಲೆ ದುರಭಿಮಾನ
ಮಾಡಿ ಮಾಡಿ ಕೆಡುತಿಹರು ಜನ 21
ಯೀಗೂಡಿಗೆವೊಂದಾಧಾರ
ಯೋಗಿಗಳರಿವರಿದರಸಾರ 22
ವರ ರಸಗಳು ನಾಲ್ಕು ತೊಗರು 23
ಹಂಚೇಳರಿಂ ಮಾಡಿಹದೇವ 24
ಘಟಿಸಿರುವುದು ಪತ್ತಲೆಯಿದರೊಳ್ 25
ಮರನಿದೆಂದು ಶಾಸ್ತ್ರದ ಮೂಲ
ಅರಿಯದೆ ನಾನೆಂಬೆನು ಬಾಲ 26
ಪಕ್ಷಿಗಳೆರಡೀ ಮರದಲ್ಲಿ
ಸಾಕ್ಷಿ ಒಂದು ಒಂದಕೆ ಅಲ್ಲಿ 27
ಮರದ ಪಣ್ಣು ತಿಂಬುವದೊಂದು
ನಿರುತವು ನೋಡುತಿರುವದೊಂದು 28
ದ್ವಾಸುಪರ್ಣ ಶೃತಿ ಇದರರ್ಥ
ದಾಸನಾಗದಿರುವನು ವ್ಯರ್ಥ 29
ಅಧ್ಯಾತ್ಮ ವಿದ್ಯದಲಿ ತೋರುವುದೇ 30
ಜೀವನಾಮ ಆತ್ಮನಿಗುಂಟು
ದೇವತಾನು ತಬ್ಬಿದ ಗಂಟು 31
ಅಭೇದ ಶೃತಿಗಳೇನಕ ವಿಧ
ಸ್ವಭಾವದಿರುನಡೆ ತೋರುವದ32
ಸುರರುತ್ತಮರು ನರರಾನಿತ್ಯ
ಸುರೇತರರು ನೀಚರು ಸತ್ಯ 33
ನೂರು ವರುಷ ಬದುಕುವರೆಂದು
ಮೀರಿ ಮನದಿ ಯೋಚಿಸಿ ಮುಂದು 34
ಬಹು ಧನಾರ್ಜನೆಯ ವೂಹೆಯಲಿ 35
ಮೊದಲು ಅನ್ನಕಿಲ್ಲೆಂದು ಮತಿ
ವಿಧ ವಿಧ ವಸ್ತ್ರಗಳಲಿ ಪ್ರೀತಿ 36
ನಾಬಡವನು ಎಂದಗಲಿರುಳು 37
ತನಗೆ ಬೇಕಂತ ಚಿಂತೆಯೊಳು 38
ಇತರರ ನೋಡಿ ತನಗಪೇಕ್ಷೆ
ಗತಿ ಇಲ್ಲದೆ ಇರುವುದೆ ಶಿಕ್ಷೆ 39
ತಾವ್ ಸಮಂಜಸದಿ ಪೇಳಿದರು 40
ಪ್ರವೃತ್ತಿ ಮಾರ್ಗದ ಸಂಪತ್ತು
ಭವಾಂಬುಧಿ ಸುಳಿಯು ವಿಪತ್ತು 41
ಫಲವ ಕೋರಿ ಕರ್ಮವ ಮಾಡಿ
ಹಲವು ಯೋನಿಗಳೊಳೋಡಾಡಿ42
ಮರಳಿ ಮರಳಿ ಜನನ ಮರಣದೆ
ದರಿಯ ಕಾಂಬ ಬಗೆ ದಾರಿಯದೆ 43
ಇದುವೆ ದೊಡ್ಡ ಸಂಸೃತಿ ವೃಕ್ಷ
ತುದಿ ಮೊದಲಿಗು ದೊರಕದು ಮೋಕ್ಷ 44
ಇನ್ನು ಅಕ್ಕ ತಂಗಿಯು ಮೊದಲು 45
ಸತಿ ಸುತರು ಬಳಗಗಳು 46
ಇವರು ತನ್ನವರಿತರರಲ್ಲ
ಭವ ಜಲಧಿಯ ಜಂತುಗಳೆಲ್ಲ 47
ಕೊಡದಿದ್ದರೆ ಕೋಪವು ಬಹಳ 48
ವಿತ್ತವಿರಲು ಬಂಧುಗಳೆಲ್ಲ
ಹತ್ತಿ ಇವನ ಬಾಧಿಪರೆಲ್ಲ 49
ಸುಳ್ಳುಹೇಳಿದರೆ ಬಹುನಂಬಿಕೆ 50
ಹಿತೋಪದೇಶದಿ ಬಹುಕೋಪ
ಪತಿತ ಜನರಿಗೆ ಇದು ಪಾಪ 51
ಒಬ್ಬ ದೈವಲೋಕಕೆ ಸತ್ಯ
ಹಬ್ಬವವನ ಭಜಿಪುದಗತ್ಯ 52
ಕಾಮುಕರಿಗೆ ಕಡೆಗೂ ದುಃಖ
ನೇಮವದಕೆ ಮೂಲವುರೊಕ್ಕ 53
ಸ್ಪøಹದಿಂದಲೆ ಕೋಪವು ಬಹುದು
ವಿಹಿತವೆಂದು ನಗುವನೆ ಸಾಧು 54
ಲೋಭದಿಂದ ಮೂಲಕೆ ನಾಶ
ಸ್ವಾಭಾವ್ಯದಿ ದುರ್ಜನಕಾಶಾ 55
ರಾಶಿ ಧನವ ಕೊಳ್ಳೆಯು ಕೊಡುವ 56
ದಾನಕೆಂದರಿಲ್ಲವು ಕಾಸು
ದಂಡಕೊಡುವುದಕೆ ಬಹುಲೇಸು 57
ನಷ್ಟವಾದರೂ ಮನಕಿಷ್ಟ
ದುಷ್ಟಾತ್ಮರು ಪಡುವರು ಕಷ್ಟ 58
ಆರ್ಯರುಕ್ತಿ ಕೇಳುವುದಿಲ್ಲ
ಕಾರ್ಯದಲಿ ವಿಘಾತವೆ ಎಲ್ಲ 59
ಧನವಿದ್ದರು ಸೌಖ್ಯವು ಕಾಣೆ
ಘನದುರಾಸೆ ಕುಜನರಿಗೆ ಆಣೆ 60
ಭೂಮಿ ಉಂಟು ತನಗೆಂಬುವರು
ನೇಮದಿ ದಂಡವ ತೆರುತಿಹರು 61
ಮಳೆಬೆಳೆಯನು ನಿಂದಿಪರು ಕೆಲರು
ಖಳರು ಸುಮನಸರ ದೂಷಿಪರು62
ಮೊದಲು ತುದಿಯಲಿ ದುರಭಿಮಾನ 63
ವ್ಯಾಪಾರದಿ ಧನ ಕಳಕೊಂಡು
ಕೋಪ ವ್ಯಾಜ್ಯಕೆಳೆವದೆ ಫಂಡು 64
ಬಲುಧನವ ಕೂಡಿಸುತಲಿ ಮುಂದು 65
ಮುಖದಾಕ್ಷಿಣ್ಯದಿ ಮಾತಾಡಿ
ವಿಕಲರನರ ಸ್ನೇಹದಿ ಕೂಡಿ66
ದೊಡ್ಡದಾಗಿ ಮನೆಯನು ಕಟ್ಟಿ
ದುಷ್ಟತನದಿ ವಾದಿಸಿ ಬಿಟ್ಟಿ 67
ಕೂಲಿಯವರ ಹೊಟ್ಟೆಗೆ ಕೊಡದೆ
ಲೋಲನಾಗಿ ವಂಚನೆ ಬಿಡದೆ 68
ಸಂಸಾರವಿದೆ ಸ್ಥಿರವೆಂದು
ಹಿಂಸೆಪಡುತಲಿ ಸದಾನೊಂದು 69
ಚತುರ ಶೀತಿ ಲಕ್ಷಯೋನಿಗಳೊಳ್
ಮತಿಹೀನರಾಗಿ ಜನಿಸುತಲೂ 70
ಭದ್ರವು ತಮಗೆಂದು ಪ್ರಾಣಿಗಳು 71
ಇದಕ್ಕಾಗಿ ಪರಾಧೀನದಲಿ
ಪದೇ ಪದೆಗೆ ತಾವು ನೋಯುತಲಿ 72
ಮನುಜ ಜನ್ಮ ಬರುವುದೆ ಕಷ್ಟ
ಮಾನಿತನಾದವನೆ ಅತಿ ಶ್ರೇಷ್ಠ 73
ಭೋಧಿಸುವಾತನೆ ಶುಭತಮನು 74
ಸುಜನರಿಲ್ಲವವರದೆ ಪಂಥ 75
ಕರ್ಮಾರ್ಥ ಶೃತಿ ಗಹನದಲಿ
ನಿರ್ಮಲರಾಗದೆ ಚಿಂತೆಯಲಿ&ಟಿbsಠಿ