ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ.
ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ
ಶ್ರೀಕರ ಗುಣಪೂರ್ಣೆ ಶೋಕಾಪಹರಣೆ
ಲೋಕನಾಯಕೆ ಘನ್ನೆ
ಪಾಕಶಾಸನಸುತೆ ಪವನಜಸೇವಿತೆ
ಸಾಕೇತನಿಲಯೆ ಸರಾಗದಿ ರಕ್ಷಿಸು 1
ಆನತನುತ ಗೀರ್ವಾಣಿ ಅಂಬುಜಪಾಣಿ
ಮಾನಿನೀಮಣಿ ಕಲ್ಯಾಣಿ ಭಯವಾರಿಣಿ
ಭಾವಜಾತ ಜನನೀ
ಭಾಗವತಾರ್ಚಿತೆ ಭಕ್ತಾಭಯಪ್ರದಾತೆ
ಬಾಗುತೆ ಶಿರ ನಿನಗೇಗಳುಂ ಮನವಾರೆ 2
ಅರಿಯೆನು ನಿನಗೆಣೆಯಾರ ಕಾಣೆನು ಹಿತರ
ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ
ಕರುಣದಿ ನೋಡೆನ್ನಿರವ
ಪರಮಪಾವನ ಶೇಷಗಿರೀಶನ
ಕರುಣಾರೂಪಿಣಿ ಜಗತ್ಕಾರಿಣಿ3