ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸುಬಾರಿ ಬೇಡಿದರೆ ಹೇಗಾಯಿತು ಹರೇ ವಾಸುದೇವನೆ ನಿನ್ನ ಧ್ಯಾನಕೆ ಸರಿಬಾರದಿರೆ ಪ ಪರಿ ಘಾಸಿಗೊಳಗಾಗಿ ಬಹು ಕ್ಲೇಶದಿಂದಲಿ ನಿನ್ನ ಆಶಿಸಿದವನಾ ಭೂಸುರ ಧೊರಿಯೆ ಶ್ರೀನಿವಾಸ ವೇಣುಗೋಪಾಲ ಕೂಸಿನಂದದಿ ಎತ್ತಿ ಪೋಷಿಸುವುದು ನಿನಗೆ ಹುಟ್ಟದೊ 1 ಸಂಸಾರ ವೆಂಬಂಥ ಶರಧಿಯೊಳು ಮುಳುಗಿ ಬಹು ಹಿಂಸೆ ಬಡುತಲಿ ಬಹಳ ಹೀನನಾಗಿ ಕಂಸಮರ್ದನನಾದ ಘನಮಹಿಮಗೋವಿಂದ ಸಂಶಯವಿಲ್ಲದೆ ನಿಮ್ಮ ಸ್ಮರಿಸುತಲಿ ಅನುದಿನವೂ 2 ಅಘಹರನೆ ನಗಧರನೆ ಆದಿ ಪರಾಕ್ರಮನೆ ನಿಗಮಗೋಚರನಾದ ಘನ 'ಹೊನ್ನ ವಿಠ್ಠಲ 'ನೆ ಜಗತ್ಕರ್ತನೆ ನಿನ್ನ ಚಿಂತನೆಯೆ ಅನುದಿನವೂ ಕರುಣಹುಟ್ಟದೇನು 3
--------------
ಹೆನ್ನೆರಂಗದಾಸರು