ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ. ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು 1 ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು 2 ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು3 ಕರ್ಮ ಶ್ರೀಹರಿಗೆ ಅರ್ಪಿತವೆಂದು 4 ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು 5
--------------
ಗೋಪಾಲದಾಸರು
ಪರ ಬೊಮ್ಮ ಸುಜ್ಞಾನವನರಿಯದ ಮನುಜನ ಪ ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ 1 ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ2 ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ3 ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ 4 ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ 5
--------------
ಶ್ರೀಪಾದರಾಜರು
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರವಮುಗಿದ-ಮುಖ್ಯಪ್ರಾಣ-ಕರವ ಮುಗಿದಪಕರವಮುಗಿದ ಶ್ರೀಹರಿಗೆ ತಾನೆದುರಾಗಿದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪಜೀವೇಶ್ವರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳನಳಿಯೆಂದು 1ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು 2ತಾರತಮ್ಯಪಂಚಭೇದಸತ್ಯವೆಂದುಮಾರುತ ಮತ ಪೊಂದಿದವರನು ಪೊರೆಯೆಂದು 3ಪರಿಪರಿ ಭಕ್ತರು ಹೃದಯ ಕಮಲದೊಳುನಿರುತ ಮಾಡುವ ಪೂಜೆ ನಿನಗರ್ಪಿತವೆಂದು 4ಹರಿಯ ಮನೋಗತವರಿತು ಮಾಡುವೆನೆಂದುಪುರಂದರವಿಠಲನ ಚರಣದ ಬಳಿಯಲ್ಲಿ5
--------------
ಪುರಂದರದಾಸರು
ಶ್ರೀ ಮಧ್ವರಾಯರ ಸೇವೆ ದೊರಕುವುದುಜನುಮ ಸಫಲ ಕಾಣಿರೋ ಪಶ್ರೀಮದಾನಂದ ತೀರ್ಥರ ಪಾದವ ನೆನೆವರುಸಾಮಾನ್ಯಸುರರುಕಾಣಿ-ಬೊಮ್ಮನಆಣಿಅ.ಪಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲಅಗುಣನು ಪರಬೊಮ್ಮನು-||ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದುಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1ಹರಿಸರ್ವೋತ್ತಮನಿತ್ಯತರುವಾಯ ರಮಾದೇವಿತರುವಾಯ ವಿಧಿಪ್ರಾಣರುಸರಸ್ವತಿಭಾರತಿಗರುಡ ಅನಂತ ರುದ್ರತರುವಾಯ ಆರು ದೇವಿಗಳು 2ಸೌಪರ್ಣಿವಾರುಣಿದೇವಿ ಅಪರ್ಣಾದೇವಿಯರು ಸಮರುದ್ವಿಪದಿ ಮನ್ವಾದಿಗಳು ||ಈಪರಿತಾರತಮ್ಯ ಜಪ-ಧ್ಯಾನಾರ್ಚನೆಯಿಂದಅಪವರ್ಗದನ ಸೇವೆಯ ಮಾಡಿರೊ ಎಂಬ 3ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿಚೆಂದದಿಂದಲಿ ಲಾಲಿಸಿ ||ಇಂದಿರಾರಮಣ ಗೋವಿಂದನೇ ದೈವವೆಂದು |ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4ಹಿಮಗಿರಿಯಿಂದ ಸೇತುವೆಯ ಪರ್ಯಂತರಭ್ರಮಿಸುತ ಸುಜನರಿಗೆ ||ಕ್ರಮತತ್ತ್ವ ಬೋಧಿಸಿ ಕಮಲನಾಭನಮೂರ್ತಿಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದುಧಾತ್ರೀ ಮುದ್ರೆಯ ತೋರಿಸಿ ||ಈತನೇ ಹನುಮಂತ ಈತನೇ ಭೀಮಸೇನಈತನೇ ಭವಿಷ್ಯದ ಬ್ರಹ್ಮಜೀವೋತ್ತಮ6ಶ್ರೀಮದನಂತನೆ ಅನಂತಕಾಲಕೆಯೆಂದುಯಮಕ ಭಾರತ ತೋರಿಸಿಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದುಪ್ರೇಮಿಪುರಂದರವಿಠಲನ ದಾಸನಾದ7
--------------
ಪುರಂದರದಾಸರು
ಹರಿಯೆ ಸರ್ವೋತ್ತಮ ಹರಿಯೆ ಪರದೈವತ |ಹರಿಯೆ ಸರ್ವಂ ವಿಷ್ಣುಮಯಂ ಜಗತು ಪ.ಹರಿಯಲ್ಲದನ್ಯತ್ರ ದೈವಗಳುಂಟೆಂದು |ಉರುಗನ ಮುಡಿಯನಾರಾದರೆತ್ತಲಿ ಅಪಜಗಂಗಳ ಪುಟ್ಟಿಸುವಬೊಮ್ಮ ನಿನ್ನ ಮಗ |ಜಗದ ಸಂಹಾರಕ ನಿನ್ನ ಮೊಮ್ಮಗನು ||ಜಗದ ಪಾವನೆ ಭಾಗೀರಥಿ ನಿನ್ನ ಮಗಳು |ಜಗದ ಜೀವನಮಾತೆ ನಿನ್ನರಸಿಯಲೆ ದೇವ 1ವಿಶ್ವತೋಮುಖ ನೀನೆ, ವಿಶ್ವತಶ್ಚಕ್ಷು ನೀನೆ |ವಿಶ್ವತೋಬಾಹುವಿಶ್ವ ಉದರ ನೀನೆ ||ವಿಶ್ವವ್ಯಾಪಾರ ವಿಶ್ವಸೂತ್ರಧಾರಕ ನೀನೆ |ವಿಶ್ವನಾಟಕ ವಿಶ್ವವಿಷ್ಣುವೇ ನಮೋ ನಮೋ 2ಆಗಮನಿಗಮ ಪೌರಾಣ ಶಾಸ್ತ್ರಂಗಳಿಗೆ |ಯೋಗಿಜನಕಗಮ್ಯಮೂರ್ತಿ ನೀನೆ ||ನಾಗಶಯನಸಿರಿ ಭೋಗಿಭೂಷಣವಿನುತ |ಭಾಗವತರ ಪ್ರಿಯ ಪುರಂದರವಿಠಲ 3
--------------
ಪುರಂದರದಾಸರು