ರಾಜೀವ ಲೋಚನ ಹರೇ ಮುರಾರೇ
ಮಾಜೀವ ಮೋಹನ ಹರೇ ಮುರಾರೇ ಪ
ರಾಜೇಂದ್ರ ನಂದನ ಹರೆ ಮುರಾರೇ
ಓ ಜಾನಕೀ ಪ್ರಿಯ ಪಾಹಿ ಖರಾರೇಅ.ಪ
ವಾರಾಶಿ ಗಂಭೀರ ಸಾಕೇತಧಾಮ
ಮಾರಾರಿ ವಂದಿತ ಲೋಕಾಭಿರಾಮ
ಘೋರಾಘಸಂಹಾರ ರಣರಂಗ ಭೀಮ
ಶ್ರೀರಾಮ ಜಯರಾಮ ಕಲ್ಯಾಣರಾಮ 1
ಪವನಾತ್ಮಜಾನಂದದಾತಾಪರೇಶ
ಭವನಾಶ ಜಗತೀಶ ದೈತೇಯನಾಶ
ಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ 2