ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೀವ ಲೋಚನ ಹರೇ ಮುರಾರೇ ಮಾಜೀವ ಮೋಹನ ಹರೇ ಮುರಾರೇ ಪ ರಾಜೇಂದ್ರ ನಂದನ ಹರೆ ಮುರಾರೇ ಓ ಜಾನಕೀ ಪ್ರಿಯ ಪಾಹಿ ಖರಾರೇಅ.ಪ ವಾರಾಶಿ ಗಂಭೀರ ಸಾಕೇತಧಾಮ ಮಾರಾರಿ ವಂದಿತ ಲೋಕಾಭಿರಾಮ ಘೋರಾಘಸಂಹಾರ ರಣರಂಗ ಭೀಮ ಶ್ರೀರಾಮ ಜಯರಾಮ ಕಲ್ಯಾಣರಾಮ 1 ಪವನಾತ್ಮಜಾನಂದದಾತಾಪರೇಶ ಭವನಾಶ ಜಗತೀಶ ದೈತೇಯನಾಶ ಸುವಿಲಾಸ ಮಾಂಪಾಹಿ ಶ್ರೀಮಾಂಗಿರೀಶಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೋಪ ಮಾಡುವರೆ - ಕೃಪಾಳು ನೀನು ಕೋಪ ಮಾಡುವರೆ ಪ ಕೋಪ ಮಾಡುವರೇನೋ ಸಂಸøತಿ ಕೂಪದೊಳು ಬಿದ್ದ್ಹೊರಳುತಿಹನ ನೀ ಪರಾಮರಿಸಿನ್ನು ಕೀರ್ತಿ ಕ- ಲಾಪವನು ಕಾಪಾಡಿಕೊಳ್ಳದೆ ಅ.ಪ. ನಾಥನು ನೀನು ಎಂದೆಂದಿಗೂ ದೂತನು ನಾನು ಸಿದ್ಧಾಂತವು | ನೀತವಿದಿನ್ನು ಕೋತಿ ಕುಣಿವುದು ಕೊರವ ಕುಣಿಸಿದ ರೀತಿಯಲಿ ಜಗತೀತಳದಿ - ವಿ ಖ್ಯಾತಿಯಲ್ಲವೆ ಮಾತು ಪುಸಿಯೇ ನೀ ತಿಳಿದು ಕರುಣಿಸದೆ ಬರಿದೆ 1 ಅರಿತವ ನೀನು - ಷಡ್ವರ್ಗದಿ ಬೆರತವ ನಾನು - ಚರಣಂಗಳಿಗೆರಗುವೆನಿನ್ನು ಅರಿತು ನೆನೆಯೆ ಪ್ರಪನ್ನರೊಮ್ಮೆಗೆ ಎರವು ಮಾಡದೆ ಪೊರೆವೆನೆಂಬುವ ಬಿರುದನುಳಿದು ಕರುಣವಿಲ್ಲದೆ ಮರೆಯ ಹೊಕ್ಕವರೊಡನೆ ಕೆರಳಿ 2 ಏನಾದರೇನು - ನೀನಲ್ಲದೆ ಪ್ರಾಣ ಸತಿಸುತ ದ್ರವ್ಯ ಮಾನಪ- ಮಾನ ಅಭಿಮಾನಗಳು ನಿನ್ನವು ದೀನ ಜನ ಮಂದಾರ ಗುಣಗಳ ಪೂರ್ಣ ಲಕ್ಷ್ಮೀಕಾಂತ ಪ್ರಭುವೆ 3
--------------
ಲಕ್ಷ್ಮೀನಾರಯಣರಾಯರು
ತೊರವಿ ನರಸಿಂಹನ ಸ್ತೋತ್ರ ನರಹರೀ | ಪಾಲಿಸೊ ಎನ್ನ | ನರಹರೀ ಪ ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ. ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ 1 ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ 2 ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು 3 ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು 4 ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ 5 ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ 6 ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ 7 ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು 8 ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ - ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ 9 ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ 10 ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ11
--------------
ಗುರುಗೋವಿಂದವಿಠಲರು
ಪ್ರಾಣಸನ್ನುತ ವಿಠಲ | ನೀನೆ ಪೊರೆ ಇವನಾ ಪ ಮೌನಿಕುಲ ಸನ್ಮಾನ್ಯ | ದೀನ ಮಂದಾರಾ ಅ.ಪ. ಯೋನಿ ಅನೇಕ ದೊಳು | ಜ್ಞಾನರಹಿತನಾಗಿಮಾನುಷತ್ವದಿ ಬಂದು | ಜ್ಞಾನ ಬಯಸೀಗಾನ ಲೋಲನ ದಾಸ್ಯ | ಕಾಂಕ್ಷಿಸುತ್ತಿರುವನಿಗೆಶ್ರೀನಿವಾಸನೆ ನಿನ್ನ | ದಾಸ್ಯ ವಿತ್ತಿಹೆನೋ 1 ಪಂಕೇರುಹಜನು ವಿiÁ | ನಾಂಕಷಿತನು ಸರ್ವಸಂಖ್ಯೆರಹಿತಾ ದೇವಾ | ಸಂಕುಲಗಳೆಲ್ಲಾಪಂಕಜಾಕ್ಷನು ಹರಿಸಿ | ಕಿಂಕರರು ತಾವಾಗಿಅಂಕೆಯಲ್ಲಿಹರೆಂಬ | ತರತಮನ ತಿಳಿಸೋ 2 ಸತ್ಯ ಜಗತೀನೊಳಗೆ | ನಿತ್ಯಹರಿ ಸುವ್ಯಾಪ್ತಕರ್ತೃ ಕರ್ಮವು ಕರಣ | ತಾ ಸೇವೇ ಆಗೀನಿತ್ಯರಿಗೆ ಕರ್ಮಗಳ | ತುತ್ತು ಮಾಡ್ಯಣಿಸುತ್ತಾಭತೃವೆಂದೆನಿಸಿಹನೆ | ಉತ್ತಮೋತ್ತಮನೆ 3 ಸಾಧನಸುಜೀವಿ ಇವೆ | ಬಾಧೆಗೊಳಗಾಗಿಹನುಮೋದತೀರ್ಥರಮತದಿ | ಸಾಧನೇಯ ಗೈಸೀಮೋದಪ್ರದನೆಂದೆನಿಸೊ | ಸಾಮವಂದಿತ ಹರಿಯೆಹೇದಯಾ ಪರಿಪೂರ್ಣ | ಆದಿ ಜಗಕರ್ತಾ 4 ಲೌಕೀಕ ಸುಖದಲ್ಲಿ | ಕಾಕುಮತಿಯನು ಕೊಟ್ಟಾಬೇಕಾದ ವೈರಾಗ್ಯ | ಭಾಗ್ಯ ಪ್ರದನಾಗೋನಾಕನದಿ ವಂದ್ಯ ಗುರು | ಗೋವಿಂದ ವಿಠಲನೆನೂಕಿಸಂತಾಪಗಳ | ಮೋಕ್ಷಪ್ರದನಾಗೋ 5
--------------
ಗುರುಗೋವಿಂದವಿಠಲರು
ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ | ಸಂಗ ವಿಡಿಯಂಗದೊಳಗ | ಮಂಗಳುತ್ಸಾಹ ದೋರುವರಾ ಪ ಹರಿಪದ ಪರಾಗ ನುಂಡು | ಹರುಷವೇರಿ ಭವಶರಧಿಗೆ | ಹರಿಯ ಭಕುತಿ ಸೇತುಗಟ್ಟಿ | ತೋರಿಸಿ ಜನರ ತಾರಿಸುವರ 1 ವೇದ ಶಾಸ್ತ್ರಸಾರವಾದ | ಬೋಧ ಸುಧೆಯ ವೆರದು ಮರದು | ಹಾದಿದೋರಿ ಮನಕ ಗತಿಯ | ಸಾಧನವನು ಬೀರುವರ 2 ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ | ಭಾವದಿಂದ ಮಹಿಪತಿ ಸ್ವಾಮಿಯಾ | ಸಾವಧಾನದಿಂದಲಿ ಜಗತೀ | ವಲಯದೊಳರಹಿಸುವರು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು