ನಿರಂಜನ ಈಶ ಬಾರೊ
ಕಾವ ಕರುಣ ಭವಭಂಜನ ಗುರು ಆತ್ಮ ಹಂಸ ಬಾರೊ ಧ್ರುವ
ಅಗಣಿತ ಗುಣ ಅಗಾಧ ಅಪಾರಾಗಮ್ಯ ಬಾರೊ
ನಿತ್ಯ ನಿರ್ಗುಣಾನಂದನುಪಮ್ಯ ಬಾರೊ
ಯೋಗಿ ಜನರ ಹೃದಯ ಮುನಿಮನೋರಮ್ಯ ಬಾರೊ
ಜಗದೊಳು ಭಕ್ತಜನರಿಗೆ ಪೂರಿತಕಾಮ್ಯ ಬಾರೊ 1
ಝಗಿಝಗಿಸುವ ಜಗಜ್ಯೋತಿ ಜಗನ್ಮೋಹನ ಬಾರೊ
ಮಘ ಮಘ ಮಿಂಚುವ ಮಗುಟಮಣಿ ಗುಣರನ್ನ ಬಾರೊ
ಬಗೆಬಗೆಯಿಂದ ಸದ್ಗೈಸುವ ಪತಿತಪಾವನ್ನ ಬಾರೊ 2
ಋಷಿ ಮುನಿವಂದಿತ ಸಾಧು ಜನ ಹೃದಯ ಬಾರೊ
ಗುಹ್ಯ ಬಾರೊ
ದಾಸ ಮಹಿಪತಿಯ ರಕ್ಷಿಸುವ ಪ್ರಾಣ ಪ್ರಿಯ ಬಾರೊ 3