ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

139-1ಶ್ರೀರಮಣ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಶ್ರೀನಿವಾಸಾಚಾರ್ಯ ಪಂಡಿತೋತ್ತಮರುಅನಿಮಿಶಾಂಶರು ಹೌದು ಭುವಿಯಲ್ಲಿ ಹುಟ್ಟಿಮಾನುಷಾನ್ನವನುಂಡು ಕರ್ಮವಾತಾವರಣಸನ್ನಿವೇಶದ ಬಲದಿ ಗರ್ವಕೊಳಗಾದರು 1ಆದಿತೇಯರು ಭೂಮಿಯಲ್ಲಿ ಜನ್ಮವ ತಾಳೆಜಾತಾಪರೋಕ್ಷಿಗಳು ಶಕ್ತ್ಯಾತ್ಮನಾವ್ಯಕ್ತ್ಯಾತ್ಮನಾಅಪರೋಕ್ಷಪ್ರಕಾಶವುಒದಗಿ ಗುರುಗಳು ಅನುಗ್ರಹವು ಮಾಡಿದರೆ 2ದೇವತಾ ಕಕ್ಷದಲಿ ದೊಡ್ಡ ಮಟ್ಟದವರುವಿಶ್ವಾಮಿತ್ರರಿಗೆ ಉತ್ತಮರು ನಾರದಗೆಆವರರೆನಿಸುವ ಭೃಗುಋಷಿಯೇ ವಿಜಯಾರ್ಯರುತಾವೆ ಬಂದರು ಶ್ರೀನಿವಾಸರ ಬಳಿಗೆ 3ಪೂರ್ವದಲೆ ಕೇಳಿಹರು ಈ ವಿಜಯದಾಸರುದೇವಾಂಶಅಪರೋಕ್ಷಜ್ಞಾನಿಗಳು ಎಂದುಈ ವಿಧದಿಪೇಳುವುದುಪುಸಿಎಂದು ನೆನೆದರುಗರ್ವಮೌಢ್ಯದಿ ಶ್ರೀನಿವಾಸ ಆಚಾರ್ಯ 4ಕನ್ನಡ ನುಡಿ ಹಾಡಿ ಕುಣಿಕುಣಿವ ಈ ದಾಸಜ್ಞಾನಿಯೆ ? ಅರಿತವನೇ ಬ್ರಹ್ಮವಿದ್ಯೆ ಎಂದುಹೀನಮಾತ್ಸರ್ಯದಿ ಮನಸೋತು ಅವಹೇ -ಳನ ಮಾಡಿದರು ವಿಜಯಾರ್ಯರಲ್ಲಿ 5ತಾಳುವ ತನ್ನಲ್ಲಿ ಮಾಡುವ ಅಪರಾಧತಾಳಹರಿ ತನ್ನ ಭಕ್ತರಲಿ ಮಾಡುವುದುಮಾಲೋಲ ನಿಯಮನದಿ ಸ್ವೋತ್ತಮಾಪರಾಧಫಲವು ಕಂಡಿತು ಶ್ರೀನಿವಾಸರಲಿ ಬೇಗ 6ರಾಜಯಕ್ಷ್ಮವೋಗುಲ್ಮಮತ್ತೇನು ರೋಗವೋರಾಜವೈದ್ಯರು ಸಹ ನಿರ್ಣಯಿಸಲಶಕ್ಯಭೋಜನ ಅರುಚಿ ಉದರಶೂಲಿತನು ಕುಗ್ಗಿಲಾಜವೂ ಸಹ ಜೀರ್ಣ ಆಗದ ಮಾಂದ್ಯ 7ಇಂದಿರೇಶಗೆ ಪ್ರಿಯ ಮಹಾತ್ಮ ಸ್ವೋತ್ತಮರಲ್ಲಿಗೈದ ಅಪರಾಧ ಫಲವೆಂದರಿಯದೆವೈದ್ಯಕ್ಕೆ ಹಣ ವೆಚ್ಚ ಮಾಡಿ ಕ್ಷೇತ್ರಗಳಿಗೆಪೋದರು ದೈವಾನುಗ್ರಹ ಪಡೆಯಲಿಕ್ಕೆ 8ವಾದೀಂದ್ರಸನ್ನುತರಾಘವೇಂದ್ರಾರ್ಯರವೃಂದಾವನದಲ್ಲಿ ಸೇವೆ ಮಾಡಿದರುಮುಂದು ಯಾತ್ರೆ ಗೈದು ಘಟಿಕಾದ್ರಿ ಹನುಮಗೆದುಗ್ಧಾಭಿಷೇಕ ಹರಿವಾಯುಸ್ತುತಿಯಿಂದ 9ಮಂತ್ರಾಲಯ ವೆಂಕಟಗಿರಿ ಘಟಿಕಾದ್ರಿಇಂಥಾ ಸುಪುಣ್ಯ ಕ್ಷೇತ್ರಗಳಿಗೆ ಪೋಗಿಮಂತ್ರಾಲಯ ಮತ್ತೂ ಬಂದು ಶ್ರೀ ರಾಘ-ವೇಂದ್ರ ತೀರ್ಥರಪಾದಭಜಿಸಿ ನಮಿಸಿದರು10ಹರಿವಾಯುಸ್ತುತಿ ಪುರಶ್ಚರಣ ಆದರದಿಚರಿಸೆ ಭಾರತೀಶನು ಮತ್ತುಗುರುರಾಘವೇಂದ್ರರುಅರುಪಿದರು ಸ್ವಪ್ನದಿ ವಿಜಯವಿಠಲ ದಾÀಸಆರ್ಯರಲಿ ಶರಣಾಗುಕ್ಷಮೆಬೇಡು ಎಂದು11ಶ್ರೀನಿವಾಸ ಆಚಾರ್ಯರು ಎಚ್ಚರಿತುತಾನು ವಿಜಯಾರ್ಯರಲಿ ಗೈದ ಅಪರಾಧನೆನೆದು ಬಹುವ್ಯಾಕುಲಪಶ್ಚಾತ್ತಪ್ತರು ಆಗಿಕ್ಷಣದಿ ಹೊರಟರು ವಿಜಯದಾಸರ ಬಳಿಗೆ 12ದೀನ ಕರುಣಾಕರರುವಿಜಯದಾಸಾರ್ಯರುಘನದಯದಿ ಶ್ರೀನಿವಾಸಾಚಾರ್ಯರ ಕ್ಷಮಿಸಿತನ್ನ ಶಿಷ್ಯ ಗೋಪಾಲದಾಸಾರ್ಯರುಅನುಗ್ರಹ ಮಾಡುವ ಗುರುಗಳು ಎಂದರು 13ಪರಮಗುರುವರ್ಯ ಶ್ರೀ ವಿಜಯದಾಸಾರ್ಯರನಿವ್ರ್ಯಾಜ ಪ್ರೀತಿ ಅಪ್ಪಣೆಯ ತಾ ಕೊಂಡುಗುರುಗಳು ಗೋಪಾಲದಾಸಾರ್ಯರಲಿ ಪೋಗಿಶರಣಾಗಿ ಶ್ರೀನಿವಾಸರು ನಮಿಸಿದರು 14ತನ್ನಲ್ಲಿ ಗುರುಗಳು ಕಳುಹಿಸಿದವರೆಂದುದೀನ ಆಚಾರ್ಯರು ನಿಜ ಶರಣರೆಂದುಚೆನ್ನಾಗಿ ಆತನ ಪರಿಸ್ಥಿತಿ ಅರಿತುಅನುಗ್ರಹಿಸಿದರು ಗೋಪಾಲವಿಠಲರು 15ಅನ್ನ ಫಲಹಾರಗಳ ಕೊಳ್ಳದ ವ್ಯಾಧಿಯಲಿಸಣ್ಣ ಬಡವಾದಂಥ ಗಾತ್ರದಿಂದಸನ್ನಮಿಸಿದ ಶ್ರೀನಿವಾಸಾಚಾರ್ಯನ್ನಮನೆಯಲ್ಲಿ ಉಪಚರಿಸಿ ಆದರಿಸಿದರು 16ಗುರುಗ ಶಿರಿವಿಜಯವಿಠಲ ತನ್ನೊಳಿಪ್ಪಶಿರಿ ಗೋಪಾಲ ವಿಠsÀಲ ಶ್ರೀನಿವಾಸಸರಸಿಜಭವಾಂಡ ದೊರೆ ಶ್ರೀ ಜನಗ್ನಾಥನ್ನಸ್ಮರಿಸಿ ಅರ್ಚಿಸಿ ನೈವೇದ್ಯ ಮಾಡಿದರು 17ನಿವೇದಿತಾನ್ನ ಜೋಳದ ರೊಟ್ಟಿ ಕೊಟ್ಟುದ್ರವ ಮಾತ್ರ ಕೊಳ್ಳುವ ರೋಗಿ ಆಚಾರ್ಯಗೆದೇವರ ಅನಿಲನಪರಮಗುರುಗಳ ನೆನೆದುಸವಿದು ಉಣ್ಣುವುದೆಂದು ಹಿತದಿ ಪೇಳಿದರು 18ಶ್ರೀನಿವಾಸಾಚಾರ್ಯ ಉಣ್ಣಲು ರೋಗವುದಿನದಿನದಿ ಕ್ರಮದಿಂದ ನಿವಾರಣ ಆಯ್ತೂಧ್ಯಾನ ಪೂಜಾಅನುಸಂಧಾನಕ್ರಮಗಳುಚೆನ್ನಾಗಿ ಆಚಾಯರಾಕರ್ಷಿಸಿದವು 19ಶ್ರೀನಿವಾಸಾಚಾರ್ಯರ ರೋಗಮೋಚನಕೆಧ್ಯಾನಿಸಿ ಜಪಿಸಿ ಶ್ರೀ ಧನ್ವಂತರಿ ಮಂತ್ರಬಿನ್ನಪವ ಮಾಡಿದರು ಕೀರ್ತನಾ ರೂಪದಿದೀನದಯಾಳು ಗೋಪಾಲದಾಸಾರ್ಯ 20ಆಹ್ನಿಕ ಜಪಗುರುಪರಮಗುರು ನಮನವಿಘ್ನವಿಲ್ಲದೆ ಆಚಾರ್ಯರು ಚರಿಸಿದರುಘನರೋಗ ಹೋಯಿತು ತ್ರಾನ ಇನ್ನೂ ಬೇಕುಶ್ರೀನಿಧಿ ನೋಡಿದನು ಕೃಪಾದೃಷ್ಟಿಯಿಂದ 21ಶ್ರೀ ನಿಧಿಃ ಸರ್ವಭೂತಾನಾಂ ಭಯಕೃದ್ಭಯನಾ -ಶನನು ವಿಜಯದಾಸಾರ್ಯ ರೂಪದಲಿತಾನೆ ಸ್ವಪ್ನದಿ ಪೇಳ್ದ ಗೋಪಾಲದಾಸರಿಗೆದಾನ ಕೊಡು ಆಯುಷ್ಯ ಚತ್ವಾರಿವರ್ಷ 22ಶಿರಿವಿಜಯವಿಠ್ಠಲ ವಾಯುಗುರುಇಚ್ಛಾನು -ಸಾರದಿ ಶ್ರೀನಿವಾಸಾಚಾರ್ಯನಲಿ ವಾತ್ಸಲ್ಯಕಾರುಣ್ಯ ತೋರಿಸಿ ತಮಗಿದ್ದ ಆಯುಸ್ಸಲಿಎರೆದರು ಧಾರೆಯ ನಲವತ್ತು ವರ್ಷ 23ಏನೆಂಬೆ ಈ ನಮ್ಮ ಗುರುಗಳ ಔದಾರ್ಯದೀನಕರುಣಾಂಬುಧಿ ಗೋಪಾಲದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ ಆಯುಷ್ಯವ ಕೊಡುವರೆ ಅನ್ಯರಿಗೆ 24ರೋಗಕಳೆದು ಆಯುರ್ದಾನವಕೊಂಡಈಬ್ಯಾಗವಟ್ಟ ಶ್ರೀನಿವಾಸಾಚಾರ್ಯಜಗನ್ನಾಥವಿಠ್ಠಲ ದಾಸರಾಯರು ಎಂದುಜಗತ್ತಲ್ಲಿ ಖ್ಯಾತರಾಗುವ ಬಗೆ ಮಾಡಿದರು 25ಗುರುಹಿರಿಯರಲಿ ಮಾಳ್ಪ ಉದಾಸೀನ ಎಷ್ಟುಭಾರಿತರ ಆಪತ್ತು ಕೊಡುವುದು ಎಂದುಗುರುಅನುಗ್ರಹದಿಂದ ಸೌಭಾಗ್ಯಲಾಭವುಅಪಮೃತ್ಯು ಪರಿಹಾರ ಎಂದು ತಿಳಿಯುತ್ತೆ 26ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 27-ದ್ವಿತೀಯಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥದಾಸರ ಕೀರ್ತನೆ139ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರು ಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಮೂಲಗುರುಅಗುರು ಶ್ರೀ ಹಂಸನಾಮಕ ಶ್ರೀಶಸಲಿಲಜಾಸನಸನಕದೂರ್ವಾಸಾದಿಗಳಪೀಳಿಗೆಯಲಿ ಬಂದ ಮರುದಂಶ ಮಧ್ವನಕಾಲಿಗೆ ಎರಗಿ ಶರಣಾದೆ ನಾ ಸತತ 1ಮಧ್ವಕರಕಂಜಭವಕಂಜನಾಭನೃಹರಿಮಾಧವಅಕ್ಷೋಭ್ಯ ಜಯತೀರ್ಥರಿಗೆ ನಮಿಪೆವಿದ್ಯಾಧಿರಾಜರಿಗೆ ರಾಜೇಂದ್ರತೀರ್ಥರಿಗೆಜಯಧ್ವಜರಿಗೆ ಮನೋ ಪುರುಷೋತ್ತಮರ್ಗೆ 2ಪುರುಷೋತ್ತಮ ಕುವರ ಬ್ರಹ್ಮಣ್ಯ ತೀರ್ಥರಿಗೆಸರಸೀರುಹನಾಭತೀರ್ಥಜರು ಲಕ್ಷ್ಮೀ -ಧರರ ಪರಂಪರೆ ಜಾತ ಸ್ವರ್ಣ ವರ್ಣರಕರಸರೋಜಭವಶ್ರೀ ಪಾದರಾಜರಿಗೆ ಶರಣು3ಸುಪುಣ್ಯ ಲಕ್ಷ್ಮೀ ನಾರಾಯಣ ತೀರ್ಥರಿಗೆಶ್ರೀಪಾದ ರಾಜತ್ವ ಯೋಗ್ಯತಾಲಿಂಗಶ್ರೀ ಭೂ ಸಮೇತ ಶ್ರೀ ರಂಗವಿಠ್ಠಲ ತಾನೆಈ ಪುಣ್ಯ ಶ್ಲೋಕರಲಿ ಬಂದು ನಿಂತಿಹನು 4ದಿನತೇಜಃ ಪುಂಜ ಬ್ರಹ್ಮಣ್ಯ ತೀರ್ಥರವನಜಕರಜರು ವ್ಯಾಸರಾಜಸ್ವಾಮಿಗಳುಘನಮಹಾ ಹರಿಭಕ್ತ ವಾದಿಗಳ ಸಿಂಹರುಆ ನಮಿಪೆ ಈ ಹರಿದಾಸಯತಿಗಳಿಗೆ 5ಪೂರ್ಣ ಪ್ರಜ್ಞಾನಂದ ತೀರ್ಥ ಮಧ್ವಾಚಾರ್ಯಕ್ಷೋಣಿಯ ಸಜ್ಜನರ ಉದ್ಧಾರಕಾಗಿಘನಮೂಲ ಗ್ರಂಥಗಳ ಸಹ ಪ್ರಾಕೃತದಲ್ಲೂಅನಘಲಕ್ಷ್ಮೀಶನ ಸ್ತೋತ್ರ ರಚಿಸಿಹರು6ಪೂರ್ಣಪ್ರಜÕರ ಜ್ಞಾನ ವಂಶಸ್ಥಯತಿಗಳುಕನ್ನಡದಿ ನುಡಿದಿರುವ ಕೀರ್ತನೆ ಪದ್ಯಗಳುಘನತರವು ಆ ರೀತಿಆದ್ಯಹರಿದಾಸರುಗಳುಕನ್ನಡದಿ ನುಡಿದಿಹರುಹರಿಪ್ರೀತಿಗಾಗಿ7ಸರ್ವದಾ ಶರಣಾದೆ ಎನ್ನ ಕಾಯುವ ತಂದೆದೇವ ಋಷಿ ನಾರದಪುರಂದರದಾಸರಲಿಶ್ರೀ ವ್ಯಾಸರಾಜರಲಿ ಉಪದೇಶ ಕೊಂಡಿಹರುನಿರ್ವಾಜ್ಯ ಭಕ್ತಿಮಾನ್ ಕಾರುಣ್ಯಶರಧಿ8ವಿಷ್ಣು ಸರ್ವೋತ್ತಮ ತದಂತರ ರಮಾದೇವಿವನು ರುಹಾಸನ ವಾಣಿ ತದಧೌ ಎಂದುತಾನೆ ನೇರಲ್ಲರಿತು ಲೋಕಕ್ಕೆ ಪೇಳಿದಘನದಯಾನಿಧಿ ಭೃಗುವೇ ವಿಜಯದಾಸಾರ್ಯ9ವಿಜಯದಾಸಾರ್ಯರರಾಜೀವಪದಯುಗಕೆನಿಜ ಭಕ್ತಿ ಪೂರ್ವಕ ಶರಣಾದೆ ಸತತವಿಜಯರಾಯರಗುರುಪುರಂದರದಾಸಾರ್ಯರುವಿಜಯರಾಯರ ಶಿಷ್ಯ ಗೋಪಾಲದಾಸರು 10ಪರಮಭಾಗವತರುಹರಿಭಕ್ತಾಗ್ರಣಿ ಕರುಣಿಹರಿಶಿರಿ ಒಲಿದಿಹ ದಾಸಮಹಂತವರವಾಯು ಗೋಪಾಲದಾಸರೊಳು ಸರ್ವದಾಸುಪ್ರಚುರನಾಗಿಹನು ಶರಣು ಗುರುವರ್ಯ 11ಕ್ಷಿಪ್ರಪ್ರಸಾದರು ವ್ಯಾಪ್ತೋಪಾಸಕರುಶ್ರೀಪತಿ ವೆಂಕಟ ಕೃಷ್ಣನಲಿರತರುಆಪತ್ತುಗಳ ಕಳೆದು ಕಾಮಿತಾರ್ಥಗಳೀವಕೃಪಾಳು ಇವರಲ್ಲಿ ನಾ ಶರಣು ಶರಣಾದೆ 12ಈ ನಮ್ಮ ಗುರುಗಳು ಗೋಪಾಲದಾಸಾರ್ಯರಲಿಘನವಿದ್ವಾಂಸರು ಬ್ಯಾಗವಟ್ಟ ಮನೆಯವರುಶ್ರೀನಿವಾಸಾಚಾರ್ಯ ಶರಣಾಗಿ ಜಗತ್ತಲ್ಲಿಜಗನ್ನಾಥ ದಾಸರು ಎಂದು ಜ್ವಲಿಸಿಹರು 13ಬ್ಯಾಗವಟ್ಟಿ ಗ್ರಾಮ ಮಾನವಿ ಎಂಬುವನಗರದ ಸಮೀಪವು ನವಾಬನಾಡಳಿತಆಗ್ರಾಮ ಶಾನಭೋಗ ನರಸಿಂಹಾಚಾರ್ಯರುಭಾಗವತಧರ್ಮವ ಆಚರಿಸುವವರು14ಹಣದಿಂದ ಶ್ರೀಮಂತರೋ ಬಡವರೋ ಹೇಗೋಗುಣದಿಂದ ಇವರು ಶ್ರೀಮಂತರು ಖರೆಯುಜ್ಞಾನಿವರ್ಯರು ಇವರು ಸುರವೃಂದದವರುಮನುಜ ಲೋಕದಿ ಜನ್ಮ ಹರಿಯ ನಿಯಮನದಿ 15ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರುಶಾನುಭೋಗಿ ಉದ್ಯೋಗವ ತ್ಯಜಿಸಿಜ್ಞಾನಿತಿಮ್ಮಣ್ಣದಾಸಾರ್ಯರಲಿ ಉಪದೇಶಅನುಗ್ರಹನಾಮಾಂಕಿತ ಹೊಂದಿದರು ಮುದದಿ 16ನರಸಿಂಹಾಚಾರ್ಯ ಲಕ್ಷ್ಮಕ್ಕ ದಂಪತಿಯಪುತ್ರರತ್ನನು ಬುದ್ಧಿರ್ಮಾ ಶ್ರೀನಿವಾಸಸೂರಿವರವರದೇಂದ್ರ ತೀರ್ಥರ ಮುಖದಿಂದಪರಾಪರ ವಿದ್ಯೆಯ ಕಲಿತನು ತೀವ್ರ 17ವರದೆಂದ್ರರಲಿ ಓದಿ ದೊಡ್ಡ ಪಂಡಿತನಾಗಿನರಸಿಂಹದಾಸರು ತಂದೆ ದಿನ ಚರಿಪಹರಿದಾಸ ಪದ್ಧತಿ ಕೀರ್ತನಾರಾಧನಹರುಷದಲಿ ನೋಡಿ ಮುದಪುಳಕ ನಾಗುವನು 18ಗೃಹಸ್ಥ ಆಶ್ರಮ ಧರ್ಮ ಚೆನ್ನಾಗಿ ಆಚರಿಸುತ್ತಅಹರಹ ಸಚ್ಛಾಸ್ತ್ರ ಪಾಠ ಪೇಳುತ್ತಬಹುಕೀರ್ತಿ ಶ್ರೀನಿವಾಸಾಚಾರ್ಯರು ಹೊಂದಿಮಹಿಯಲ್ಲಿ ಪ್ರಖ್ಯಾತರಾಗಿ ಜ್ವಲಿಸಿಹರು 19ವಾರಿಜಾಸನ ಪಿತನು ಪೂರ್ಣಪ್ರಜÕರ ಹೃಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 20- ಪ್ರಥಮೋಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು