ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈಜಗಜ್ಜನಕ [ಮಾಂ] ಪಾಲಯಾ ಪ ರಾಜಿತ ಮಣಿಕೋಟಿ [ರುಚಿ] ರ ರಾಜರಾಜ ಸುರಭೂಜ ಕೃಪಾಕರ ಅ.ಪ ಕಾರುಣ್ಯ ಮಂದಿರ ಲಾವಣ್ಯ ಚಂದಿರ ತಾರುಣ್ಯ ಬಂಧುರ ಪಾಹಿ ಕೃಪಾಕರ ತ್ರಿಲೋಕ ಮೋಹನ ತ್ರಿಲೋಕ ಪಾವನ ತ್ರಿಲೋಕ ಜೀವನ ತ್ರಿಲೋಕ ರಂಜನ 1 ಶರಣಾಗತ ಪಾಲ ಗೋಪಾಲ ಮುರಳೀಧರ ತುಳಸಿ ವನಮಾಲ ಸರಸೀರುಹ ನಯನ ಪೀತಾಂಬರ ಕರುಣಾಕರ ಮಾಂಗಿರೀಶ ಶ್ರೀಕರ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ಬಂದ ಶ್ರೀ ಹರಿ ಬಂದ ಪ ಬಂದ ಬಂದ ಮುಚುಕುಂದ ಪರದ ಅರ- ವಿಂದನಯನ ಗೋವಿಂದ ಪರಾತ್ವರ ಕಂದನೆನ್ನ ಮನ ಮಂದಿರಕೀಗಲೆ ನಂದವ ನೀಡುತ ಇಂದಿರೆಸಹಿತದಿ ಅ.ಪ. ಪೊತ್ತವ ಬಂದ ಅಜಿತನುಬಂದ ಚಾರುವರಾಹನು ಭೂಸಹಬಂದ ಪೋರನ ಸಲಹಿದ ಘೋರನು ಬಂದ ಭಾರ್ಗವ ಬಂದ ಕೌರವವಂಶಕುಠಾರನು ಬಂದ ಕಲ್ಕಿಯು ಬಂದ 1 ಉಸುರಲು ಹಯಮುಖಬಂದ ದತ್ತನುಬಂದ ನೀಡಲು ಯಜ್ಞನುಬಂದ ಸಾಧುಹರಿನಾರಾಯಣ ಬಂದ ಶಿಂಶುಮಾರನು ಬಂದ ಧನ್ವಂತ್ರಿಯು ಬಂದ 2 ಶ್ರೀ ವಿಷ್ಣುವು ಬಂದ ಉಲ್ಲಾಸದಿ ಬಂದ ಸಂತೋಷನು ಬಂದ ತೈಜಸ ಕರುಣದಿ ಬಂದ ಮುಕ್ತೇಶನು ಬಂದ ಪರಾದ್ಯನಂತನು ಬಂದ 3 ಜಗನೂಕೂವ ಬಂದ ಪುರುಹೂತ ವಿನುತ ಸಕಲಾರ್ತಿಹರ ತಾ ಬಂದ ವೈರಾಜ್ಯನು ಬಂದ ಶೃತಿ- ನೀಕ ಸುವಂದಿತನಿರುಪಮ ಬಂದ ವಾಕುಮನಕೆ ಸಾಕಲ್ಯಸಿಗದ ಪುಣ್ಯ- ವಿವರ್ಜಿತ ಭಗಲೋಕೈಕ ವಂದ್ಯ ನಿಜಭಕ್ತಗಣ ಜಯಪರಾಕುನುಡಿಯುತಿರೆ ಮೆಲ್ಲ ಮೆಲ್ಲಗೆ4 ಸರ್ವಸಾಕ್ಷಿಗಭೀರ ಪರಾಕು ಸ್ವತಂತ್ರನೆ ಪರಾಕು ಸರ್ವರಪಾಲಿಪ ಸರ್ವರ ರಕ್ಷಿಪ ಸರ್ವಚರಾಚರಭಿನ್ನ ಪರಾಕು ಪ್ರತಿಪಾದ್ಯಪರಾರು ಸರ್ವಕಾಲದಲಿ ಸರ್ವದೇಶದೊಳು ಸರ್ವದೆಶೆಯೊಳು ಸಮನೆ ಪರಾಕು ಪರಾಕು 5 ನಿತ್ಯಾನಿತ್ಯಜಗಜ್ಜನಕ ಸರ್ವೋತ್ತಮ ಸತ್ಯಸಂಕಲ್ಪ ಪರಾಕು ನಿಖಿಳಪ್ರದಾಯಕ ಪರಾಕು ಭೃತ್ಯಾನುಗ್ರಹ ಕಾರಕಶೀಲ ಸದಾಪ್ತತಮ ವಿಶ್ವಾತ್ಮನೆಪರಾಕು ನಿತೈಶ್ಪರ್ಯ ಕೀತ್ರ್ಯಾತ್ಮಕ ಸರ್ವಾತತ ಬಲವಿಖ್ಯಾತಪರಾಕು ನೀತ ಜ್ಞಾನಾನಂದ ಪರಿಪೂರ್ಣನಿತ್ಯತೃಪ್ತ ಮಹಾಂತ ಪರಾಕು ಪರಾಕು 6 ಪರಾಕು ರೂಪಾತ್ಮ ಪರಾಕು ಪುರುಷ ಸೂಕ್ತ ಸುಗೇಯ ಪ್ರಖ್ಯಾತ ಮಹಾಮಹಿಮ ಪರಾಕು ನಾಮಕ ಪರಾಕು ಸುನಾಮ ಓಂಕಾರಾಧಿಪ ಪರಾಕು ವಿಭೂತಿ ಪರಾಕು 7 ಪ್ರೇಮ ಚೊಕ್ಕ ಸೃಷ್ಟಿಗೈವನಿತ್ಯಸುನೇಮ ಕರುಣಾಮಣಿ ಶ್ರೀಕಾಮ ಅಕ್ಕರೆಯಲಿ ಜಗಕಾವ ನಿಸ್ಸೀಮ ಮುಕ್ಕಣ್ಣ ವಿಧಿಸಿರಿ ಸಾರ್ವಭೌಮ ವಿನುತ ಗುಣಲಲಾಮ ಸುನಾಮ ಮೇಘಶ್ಯಾಮ 8 ಸುಂದರ ಬಂದ ಸೃಷ್ಠಿಸ್ಥಿತಿಲಯಗೈವ ಮು- ವೃಂದಕಳೆದು ನಿಜ- ಸುಧಾರ್ಣವ ಬೃಹತೀನಾಮಗ ಮಂದಸ್ಮಿತ ವದನವ ತೊರುವ ಈತನು ಸ್ಯಂದನವೇರಿಹ ಜಯಮುನಿಹೃದಯಗ ಮಧ್ವರಮಾವರ ಶ್ರೀಕೃಷ್ಣವಿಠಲನು ಭವ ಪರಿವಾರದ ಕೂಡಿಯೆ ಬಂದಾ 9
--------------
ಕೃಷ್ಣವಿಠಲದಾಸರು
ಭಜಿಸಬಾರದೆ ಹರಿಯ [ಮನವೇ] ಭಜಕರಕ್ಷಕ ದೊರೆಯ ಪ. ಗಜಪತಿ ವರದನ ತ್ರಿಜಗಜ್ಜನಕನ ಅಜಮಿಳ ವರದನ ವಿಜಯನ ಸಖನಾಅ.ಪ. ಕಾಮಕ್ರೋಧವ ಸುಟ್ಟು [ಶ್ರೀರಾಮನೋಳ್ ಮನನೆಟ್ಟು] ನೇಮಧರ್ಮದಿ ಬುದ್ಧಿಯನಿಟ್ಟು ತಾಮಸ ಬುದ್ಧಿಯ ಬಿಟ್ಟು 1 ಸತ್ಯಮಾರ್ಗವ ಬಿಡದೆ ದುಷ್ಕøತ್ಯದೊಳ್ ಮನಗೊಡದೆ ಸತ್ವಗುಣಭರಿತ ಜರಾಮೃತ್ಯುರಹಿತ ನಿತ್ಯತೃಪ್ತನನೀಂ 2 ನ್ಮಂದಿರದೊಳಗಾನಂದದಿ ನೆಲಸಿರುವಂದವ ಮರೆಯದಿನ್ನು 3 ಪರಮಾಚಾರ್ಯರುಗಳ ನಾಮಸ್ಮರಣೆಯ ಸೌಭಾಗ್ಯದಲಿ ವರಗುರುಗಳ ಘನ ಕರುಣಾಕಟಾಕ್ಷದಿ ಸಿರಿವರನ ನೆಲೆಯರಿವತನಕ 4 ವಾತಾತ್ಮಜ ಸಂಸೇವಿತೆಯ ಭೂಜಾತೆಯ ಜನಕಸುತೆಯ ಸೀತೆಯ ನಿಮಿಕುಲಪೂತೆಯ ತ್ರಿಜಗನ್ಮಾತೆಯ ಶುಭಗುಣಯುತೆಯ [ನಿಗೆ] 5 ತರುಣಿ ಕುಲಾಂಬುಧಿ ಸೋಮರಾಮ ತ್ರಿಭುವನ ಮೋಹನ ಶ್ಯಾಮ ವರದ ಶೇಷಾಚಲಧಾಮನ ಸತ್ಯವಿಕ್ರಮ ರಘುರಾಮನ ನೀ 6
--------------
ನಂಜನಗೂಡು ತಿರುಮಲಾಂಬಾ
ಶ್ರವಣ ಮಂಗಳನೀವುದೊ ಎನ್ನ ಕರ್ಣಗಳಿಗಾ- ನಂದ ಕೊಡುವುದು ಶರಣ ಜನರಿಗೆ ಬಂದ ದುರಿತಗಳ್ಹರಣ ಮಾಡುವುದು 1 ಭರಣ ಭೂಷಿತನಾದ ಲಕ್ಷ್ಮೀರಮಣ ನೀಲಾ- ವರಣ ನಿನ್ನ ಝಣ ಝಣಂದಿಗೆ ನಾದ ನೂಪುರ ಚರಣಕ್ವಂದಿಸುವೆ 2 ಕಮಲನಾಳದಿ ಪುಟ್ಟಿದಾತನ ಜನನಿ ಪತಿ ಜಗಜ್ಜನಕ ನಿನ್ನ ವನಜಪಾದಕೆ ನಮಿಸುವೆನೊ ಈ ಮನವು ನಿನ್ನಲ್ಲಿ 3 ನಿಲಿಸಿದರೆ ನಾ ನಿನ್ನ ನಾಮವ ನೆನೆಸಿದರೆ ಫÀಲಫಲಿಸಿ ಬಾಹೋದು ಒಲಿಸುವನು ವೈಕುಂಠಪತಿ ನೀ ಮನಸು ಮಾಡುವರೆ 4 ಘನಮಹಿಮ ಗಾಂಧಾರಿ ಸುತರನು ಹನನ ಮಾಡಿದ ಪವನ ಪ್ರಿಯನೇ ಜನುಮ ಜನುಮದಿ ನಿನ್ನ ಬಿಡೆ ನಾ ಜಗದ ವಲ್ಲಭನೆ 5 ಪತಿ ನಿನ್ನ ಸುಂದರಾಂಗವನು ತೋರದಲೆ ಭವ ಭಂಗ ಬಿಡಸುವು- ದ್ಯಾತಕೋ ಶ್ರೀರಂಗ ಪೇಳಿನ್ನು 6 ಚಕ್ರದಂದದಿ ತಿರುಗೊ ಎನಮನ ಚಕ್ರಧಾರಿಯೆ ನಿನ್ನ ಕಾಣದೆ ಶಕ್ರಸುತನ ಸಖನೆ ದಯಮಾಡ್ಹಕ್ಕಿವಾಹನನೆ 7 ಅನ್ನದಾತನು ಇರಲುಕಾಣದೆ ಅನ್ಯರಿಗೆ ಬಾಯ್ತೆರೆಯಲ್ಯಾತಕೆ ಪನ್ನಗಾದ್ರಿಶಯನ ನೀ ಸಲಹೆನ್ನ ಶ್ರೀಹರಿಯೆ 8 ಸರ್ವಗುಣ ಸಂಪನ್ನ ಸರ್ವೋತ್ತಮನೆ ಸರ್ವ ವ್ಯಾಪಾರಗಳನು ಸರ್ವಕಾಲದಿ ನಡೆಸುತಿರುವ ಸರ್ವರಾಧಾರಿ 9 ವರಮಹಾಲಕ್ಷ್ಮೀಪತಿಯೆ ವಾರಣವರದ ನಿನ್ನ ಸುರ ವಿರಿಂಚನಾ ಹರನು ವೀಣಾ- ಪಾಣಿನಾರದ ಬರಿದೆ ನಮಿಸುವರೆ 10 ಪರಮ ಕರುಣಾಶರಧಿ ಎನ್ನ ದುರಿತಗಳ ನೀ ದೂರ ಮಾಡುವೆ ಬಿರುದು ನಿನ್ನದÀು ಬಿಡದೆ ಭೀಮೇಶಕೃಷ್ಣ ಸಲಹೆನ್ನ 11
--------------
ಹರಪನಹಳ್ಳಿಭೀಮವ್ವ