ಕಾವದು ಎನ್ನನುದಿನಾ ರಂಗಾ|
ಕಾವದು ಕಾವದು ಎನ್ನನುದಿನಾ |
ಭಾವಿಕ ಜನರ ನಿಧಾನಾ ಪ
ಜಲದಲಿ ಕರಿಯಾ ಪಿಡಿದ ಮಕರಿಯಾ |
ಸೀಳಿದ ಯಾದವರಾಯಾ |
ಇಳೆಯೊಳು ಗಿರಿಯಾ ಧರಿಸಿದೆ ಗರಿಯಾ |
ಕುಲ ಅರಿನಂದನ ಪ್ರೀಯಾ 1
ರಮಣನೆ ಸಿರಿಯಾ ಲಲನೆಗೆ ಸೀರಿಯಾ |
ಸಮಯಕ ನಿತ್ತ ಅನೇಕ |
ಕಮನೀಯ ಕಾಯಾ ದೇವ ನೀ ಕಾಯಾ |
ಜನಕನೇ ವ್ಯಾಪ್ತ ತ್ರಿಲೋಕಾ 2
ಸರಸಿಜನಯನಾ ಸಾಸಿರ ನಯನಾ |
ಸೋದರ ದೇವ ದೇವೇಶಾ |
ವರಸದ್ವದನಾ ಈ ರೆರಡೊದ ನಾ |
ವಂದಿತ ಚರಣಾ ಶ್ರೀಯೀಶಾ3
ಭಕುತರಬಂಧು ಕೈರವ ಬಂಧು
ಶೇಖರಧೇಯ ಮುಕುಂದಾ |
ಸಕಲಾಧಾರಾ ದಿನೊದ್ಧಾರಾ |
ದೇವಕಿ ದೇವಿಯ ಕಂದಾ4
ಸುಜನರ ಪಕ್ಷಾ ಕುಜನ ವಿಪಕ್ಷಾ |
ಶ್ರೀ ವತ್ಸಾಂಕಿತ ದೇವಾ |
ಗಜವರ ವರದಾ ಯದುಕುಲ ವರದಾ |
ನವಮರ್ಧನ ಜಗಜೀವಾ5
ಕಾಳಿಯ ಸರ್ಪಾ ಮದಹರ ಸರ್ಪಾ|
ಶನವಾಹನ ಗೋವಿಂದಾ |
ಶ್ರೀ ಲಲನೀಯಾ ಸದ್ಭಾವನೀಯಾ |
ಪೂರಿತ ಪರಮಾನಂದಾ6
ಸಿಂಧು ಸಿಂಧು |
ವಿಗಾಗಿಹೆ ಕುಂಭಜ ನೀನು |
ಹರಣ ರಂಗಾ |
ಧೀರನೇ ಭಜಕರ ಧೇನು7
ನವನೀತ ಚೋರಾ ನಿಗಮದ ಚೋರಾಂ |
ತಕ ಗೋಕುಲ ವಿಹಾರಾ |
ಭವ ಪರಿಹಾರಾ ಕೌಸ್ತುಭಧಾರಾ |
ಮಹಿಪತಿಸುತ ಮನೋಹಾರಾ 8